ಮಡಿಕೇರಿ, ಡಿ. 15: ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಆಯೋಜಿತ ತಾಲೂಕು ಮಟ್ಟದ ಜಾನಪದ ನೃತ್ಯ ಕಾರ್ಯಕ್ರಮದಲ್ಲಿ ತಾಲೂಕಿನ 28 ಶಾಲೆಗಳಿಗೆ ಸೇರಿದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಜಾನಪದ ಸಂಸ್ಕøತಿ ಬಿಂಬಿಸುವ ವೈವಿಧ್ಯಮಯ ನೃತ್ಯಗಳನ್ನು ತಂಡಗಳು ಪ್ರದರ್ಶಿಸಿದವು. ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಜಾನಪದದ ರಂಗು ಪಸರಿಸಿತ್ತು. ವರ್ಣಮಯ ಉಡುಗೆ, ಕಾಡು ಮನುಷ್ಯರಂತೆ ತೊಡುಗೆಗಳು ಸೇರಿದಂತೆ ಜಾನಪದ ಸಂಸ್ಕøತಿ ಬಿಂಬಿಸುವ ನೃತ್ಯಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ಮನಸೂರೆಗೊಂಡರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತೀಯ ವಿದ್ಯಾಭವನದ ಕೊಡಗು ಘಟಕದ ಅಧ್ಯಕ್ಷ ಕೆ.ಎಸ್. ದೇವಯ್ಯ ಅವರು ಜಾನಪದ ಸಾಹಿತ್ಯದ ಮಹತ್ವದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಅಗತ್ಯ ಎಂದರು.
ಜಾನಪದ ಸಾಹಿತ್ಯವು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದ್ದು,
(ಮೊದಲ ಪುಟದಿಂದ) ಪ್ರತಿನಿತ್ಯ ಜರುಗುವ ಘಟನೆಗಳನ್ನು ಒಳಗೊಂಡಿದೆ ಎಂದರು. ಜಾನಪದ ಸಾಹಿತ್ಯದ ಬೇರುಗಳು ಭಾರತೀಯ ಸಂಸ್ಕøತಿಯಲ್ಲಿ ಆಳವಾಗಿ ಬೇರೂರಿದರೂ ಸಹ ಅದರ ಚಿಗುರು ಹೆಚ್ಚಾಗಿ ವೃದ್ಧಿಸಬೇಕು ಎಂದು ಹೇಳಿದರು.
ಜಿಲ್ಲಾ ಜಾನಪದ ಪರಿಷತ್ನ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ ಜಾನಪದ ಗೀತೆ, ಕಲೆ, ನೃತ್ಯ ಸಂಸ್ಕøತಿಯನ್ನು ಪ್ರೀತಿಸಬೇಕೆಂದು ಕಿವಿಮಾತು ಹೇಳಿದರು.
ಜಾನಪದ ಹೃದಯದಿಂದ ಹೃದಯಕ್ಕೆ ಬಂದ ಕಲೆಯಾಗಿದೆ. ಈ ಕಲೆಯನ್ನು ಉಳಿಸಿ ಬೆಳಸುವದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅವರು ಹೇಳಿದರು.
ಜಾನಪದ ಪರಿಷತ್ನ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ರವೀಂದ್ರ ರೈ ಮಾತನಾಡಿ ಸೋಲು-ಗೆಲುವು ಪ್ರತಿಯೊಂದು ಕ್ಷೇತ್ರದಲ್ಲಿ ಇದ್ದೇ ಇರುತ್ತದೆ. ಜೀವನದಲ್ಲಿ ಸೋಲನ್ನು ಮೆಟ್ಟಿ ನಿಂತಾಗ ಗೆಲುವು ನಿಶ್ಚಿತವಾಗಿ ದೊರಕುತ್ತದೆ. ಸಿಕ್ಕ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಜಾನಪದ ಪರಿಷತ್ನ ಜಯಲಕ್ಷ್ಮೀ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ್, ಗ್ರೀನ್ ಸಿಟಿ ಫೆÇೀರಂ ಅಧ್ಯಕ್ಷ ಕುಕ್ಕೇರ ಜಯಾ ಚಿಣ್ಣಪ್ಪ, ಜಾನಪದ ಪರಿಷತ್ನ ಜಿಲ್ಲಾ ಉಪಾಧ್ಯಕ್ಷರಾದ ಅಂಬೆಕಲ್ ಕುಶಾಲಪ್ಪ, ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಐ ಮುನೀರ್ ಅಹಮ್ಮದ್, ರೋಟರಿ ಮಿಸ್ಟಿ ಹಿಲ್ಸ್ನ ನಿರ್ದೇಶಕರುಗಳಾದ ಅಂಬೆಕಲ್ ವಿನೋದ್, ಪ್ರಸಾದ್ ಗೌಡ, ಶಶಿಮೊಣ್ಣಪ್ಪ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಸಂಗೀತಾ ಪ್ರಸನ್ನ, ಖಜಾಂಜಿ ಅಂಬೆಕಲ್ ನವೀನ್ ಕುಶಾಲಪ್ಪ, ಇತರರು ಇದ್ದರು.
ವಿದ್ಯಾರ್ಥಿಗಳು 1 ರಿಂದ 4, 5 ರಿಂದ 7 ಮತ್ತು 8 ರಿಂದ 10 ನೇ ತರಗತಿ ವಿಭಾಗಗಳಲ್ಲಿ ಜಾನಪದ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಾಲೂಕು ಜಾನಪದ ಪರಿಷತ್ನ ಅಧ್ಯಕ್ಷ ಅನಿಲ್ ಎಚ್.ಟಿ. ಸ್ವಾಗತಿಸಿ, ನಿರೂಪಿಸಿದರು. ಖಜಾಂಚಿ ಅಂಬೆಕಲ್ ನವೀನ್ ಕುಶಾಲಪ್ಪ ವಂದಿಸಿದರು.