ಸಿದ್ದಾಪುರ, ಡಿ. 15: ಮಾಲ್ದಾರೆಯ ಜನಪರ ಕ್ರೀಡಾ ಮತ್ತು ಕಲಾ ಯುವ ಜನ ಸಂಘದ ವತಿಯಿಂದ ನೆಹರು ಯುವ ಕೇಂದ್ರ ಮಡಿಕೇರಿ ಹಾಗೂ ಜೆಲ್ಲಾ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಎರಡು ದಿನದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ ಮಾಲ್ದಾರೆ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಮಾಲ್ದಾರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜ ಹಾಗೂ ಪ್ರೌಢಶಾಲಾ ದೈಹಿಕ ಶಿಕ್ಷಕಿ ಈಶ್ವರಿ ನೆರವೇರಿಸಿದರು.

ಈ ಪಂದ್ಯಾಟದಲ್ಲಿ ರಾಜ್ಯದ ಹೆಸರಾಂತ ತಂಡಗಳು ಭಾಗವಹಿಸಿದ್ದವು. ಈ ಸಂದರ್ಭ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದ ಆಂಬುಲೆನ್ಸ್ ಚಾಲಕ ಪ್ರದೀಪ್ ಹಾಗೂ ಮೆಡಿಕಲ್ ಟೆಕ್ನಿಷಿಯನ್ ಜಯಂತ್, ಚಿತ್ರ ಕಲಾವಿದ ಬಾವ ಮಾಲ್ದಾರೆ, ಚಂಡೆ ಕಲಾವಿದ ಮಾಲ್ದಾರೆಯ ಶಾಜಿ ಅವರನ್ನು ಸನ್ಮಾನಿಸಲಾಯಿತು.

ವಿಶೇಷಚೇತನರಾದ ಅನಿಲ್ ಅವರಿಗೆ ವೀಲ್‍ಚೇರ್ ಹಾಗೂ 18 ವರ್ಷದ ಪೋಲಿಯೋ ಬಾಧಿತ ರೆನಿಲ್ ಸಂಚು ಅವರಿಗೆ ಏರ್ ಬೆಡ್ ನೀಡಲಾಯಿತು. ಸಮಾರೋಪ ಸಮಾರಂಭದಲ್ಲಿ ಶಾಜಿ ಅವರ ನೇತೃತ್ವದಲ್ಲಿ ಪುರುಷ ಹಾಗೂ ಮಹಿಳಾ ತಂಡದವರಿಂದ ಚಂಡೆ ಪ್ರದರ್ಶನ ವಿಶೇಷ ಮೆರುಗು ನೀಡಿತು.

ಫೈನಲ್ ಪಂದ್ಯಾಟದಲ್ಲಿ ಡಿ-ಒನ್ ಫ್ರೆಂಡ್ಸ್ ತಂಡ ಹಾಗೂ ಎ.ವೈ.ಸಿ. ಹೊದವಾಡದ ಉತ್ತಮ ಸೆಣಸಾಟದಲ್ಲಿ ಡಿ-ಒನ್ ಫ್ರೆಂಡ್ಸ್ ಮೇಲುಗೈ ಸಾಧಿಸಿ ಜನಪರ ಟ್ರೋಫಿ ಹಾಗೂ 20018 ರೂ.ಗಳ ನಗದನ್ನು ತನ್ನದಾಗಿಸಿಕೊಂಡಿತು. ಎವೈಸಿ ಹೊದವಾಡ ತಂಡ ದ್ವಿತೀಯ ಬಹುಮಾನವಾಗಿ ಟ್ರೋಫಿ ಹಾಗೂ 10018 ರೂ.ಗಳ ನಗದನ್ನು ಪಡೆಯಿತು. ಉತ್ತಮ ತಂಡವಾಗಿ ನಾಪೋಕ್ಲು ತಂಡ, ಬೆಸ್ಟ್ ಸ್ಮಾಶರ್ ಪ್ರಶಸ್ತಿಯನ್ನು ರಾಜ್ಯಮಟ್ಟದ ಆಟಗಾರ ಡಿ-ಒನ್ ತಂಡದ ಆಟಗಾರ ಪಡೆದುಕೊಂಡರು. ಬೆಸ್ಟ್ ಲಿಫ್ಟರ್ ರಾಜ್ಯಮಟ್ಟದ ಆಟಗಾರ ಚಪ್ಪಾತಿ ಹಾಗೂ ಬೆಸ್ಟ್ ಆಲ್‍ರೌಂಡರ್ ಆಗಿ ಗೋಣಿಕೊಪ್ಪದ ಕಾವೇರಿಯನ್ಸ್ ತಂಡದ ಚಿನ್ನು ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಜೋಸ್ ಕುರಿಯನ್, ಜೋಸ್-ಮಟ್ಟಂ, ರಾಜು, ರಘು ಕರುಂಬಯ್ಯ, ಮುಸ್ತಫ ಸಿಟಿ ಬಾಯ್ಸ್, ಮಣಿ, ಮುನ್ನ ಬಶೀರ್, ಡೋಮಿನೋಸ್ ಅಧ್ಯಕ್ಷ ಶೌಕತ್, ವರ್ಗಿಸ್, ಪದ್ಮೇಶ್, ಯತೀಶ್, ಚಿನ್ನಮ್ಮ, ಪತ್ರಕರ್ತ ಅಸೀಸ್, ಮುಬಾರಕ್, ಸುಬ್ರಮಣಿ ಇನ್ನಿತರರು ಹಾಜರಿದ್ದರು. ಮಾಲ್ದಾರೆ ಬಾವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.