ಸುಂಟಿಕೊಪ್ಪ, ಡಿ. 15: ಸುಂಟಿಕೊಪ್ಪ ಶ್ರೀ ಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಅಧ್ಯಕ್ಷರಾಗಿ ದ್ವಿತೀಯ ಬಾರಿಗೆ ಎಂ.ಟಿ. ಧನು ಕಾವೇರಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಗೋಪಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ದೇವಾಲಯದ ಆವರಣದಲ್ಲಿ ಧನು ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ನೇಮಕಗೊಳಿಸಲಾಯಿತು. ಗೌರವಾಧ್ಯಕ್ಷರಾಗಿ ಕೆ.ಎ. ಬಾಲಕೃಷ್ಣ, ಮುತ್ತಯ್ಯ, ಆರ್.ಟಿ. ಮೋಹನ, ಟಿ.ಜಿ. ರಾಧಾಕೃಷ್ಣ, ಉಪಾಧ್ಯಕ್ಷರಾಗಿ ಬಿ.ಎಂ. ಸುರೇಶ್ (ಪುಟ್ಟ), ಬಿ.ಕೆ. ಪ್ರಶಾಂತ್‍ಕುಮಾರ್, ಅಣ್ಣುಶೇಖರ್, ವಿನು, ವಿ.ಎ. ಸಂತೋಷ್, ಖಜಾಂಚಿಯಾಗಿ ಎ.ಶ್ರೀಧರನ್, ಕಾರ್ಯದರ್ಶಿಯಾಗಿ ಶಿವರಾಮ್, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಆರ್. ಶಶಿ, ಬಿ.ಕೆ. ರಂಜಿತ್, ಎಂ. ಉದಯ, ಸಹ ಕಾರ್ಯದರ್ಶಿಯಾಗಿ ಡಿ.ಕೆ. ರಾಜೇಶ್, ಪಿ. ಲೋಕೇಶ್ ಹಾಗೂ 9 ಮಂದಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.