ಶನಿವಾರಸಂತೆ, ಡಿ. 16: ತಾ.ಪಂ. ಸದಸ್ಯ ಹೆಚ್.ಬಿ. ಕುಶಾಲಪ್ಪ ಅವರ ಅನುದಾನ ರೂ. 5 ಲಕ್ಷ ವೆಚ್ಚದಲ್ಲಿ ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ಅವರದಾಳು ಗ್ರಾಮದ ಎಸ್.ಸಿ-ಎಸ್.ಟಿ. ಕಾಲೋನಿಗೆ ಕಾಂಕ್ರಿಟ್ ರಸ್ತೆ ಕಾಮಗಾರಿ, ಮುದ್ರವಳ್ಳಿ ಶಾಲೆಯ ಮೇಲ್ಛಾವಣಿ ದುರಸ್ತಿ ಹಾಗೂ ಪೈಪ್‍ಲೈನ್ ಕಾಮಗಾರಿಗೆ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಅವರು ಭೂಮಿಪೂಜೆ ನೆರವೇರಿಸಿದರು. ಹೆಚ್.ಬಿ. ಕುಶಾಲಪ್ಪ ಸಮಾರಂಭ ಉದ್ಘಾಟಿಸಿದರು.
ಜಿ.ಪಂ. ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ, ಹಂಡ್ಲಿ ಗ್ರಾ.ಪಂ. ಅಧ್ಯಕ್ಷ ಸಂದೀಪ್, ಜಿ.ಪಂ. ಮಾಜಿ ಸದಸ್ಯ ಎ.ಟಿ. ಹನುಮಂತಪ್ಪ, ಮಾಜಿ ಸೈನಿಕ ಕೆ.ವಿ. ಮಂಜುನಾಥ್ ಮಾತನಾಡಿದರು. ಊರಿನ ಪ್ರಮುಖರಾದ ಬಿ.ಕೆ. ರತ್ನಮ್ಮ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಂಡ್ಲಿ ಗ್ರಾ.ಪಂ. ಸದಸ್ಯ ಬೆಳ್ಳಿ, ಗ್ರಾಮಸ್ಥರಾದ ಬಿ.ಕೆ. ಜಯಚಂದ್ರ, ಎ.ಕೆ. ರಾಜಶೇಖರ್, ಎ.ವಿ. ರಾಜಶೇಖರ್, ಎ.ಟಿ. ರಾಜಶೇಖರ್, ಯು.ಎಂ. ಧರ್ಮಪ್ಪ, ಮುತ್ತಪ್ಪ, ಸ್ವಾಮೀಜಿ ಶಂಭುಲಿಂಗಪ್ಪ, ಜ್ಯೋತಿ, ಭಾಗೀರಥಿ, ಗುತ್ತಿಗೆದಾರ ಕೆ.ಎ. ಹಮೀದ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶ್ರೀ ಸದಾಶಿವ ಸ್ವಾಮೀಜಿ, ಜಿ.ಪಂ. ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ, ಊರಿನ ಪ್ರಮುಖರಾದ ಬಿ.ಕೆ. ರತ್ನಮ್ಮ, ಜಿ.ಪಂ. ಮಾಜಿ ಸದಸ್ಯ ಎ.ಟಿ. ಹನುಮಂತಪ್ಪ, ಹಂಡ್ಲಿ ಪಂಚಾಯಿತಿ ಅಧ್ಯಕ್ಷ ಸಂದೀಪ್ ಅವರುಗಳನ್ನು ಸನ್ಮಾನಿಸಲಾಯಿತು.