ಗೋಣಿಕೊಪ್ಪ ವರದಿ, ಡಿ. 16: ಮಾಯಮುಡಿಯಲ್ಲಿ ನಡೆಸಲು ಉದ್ದೇಶಿಸಿರುವ ಕೊಡವ ಸಾಂಸ್ಕøತಿಕ ಮೇಳದಲ್ಲಿ ಮಾಯಮುಡಿ ಗ್ರಾಮದ 8 ಸಾಧಕರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು. ಅಲ್ಲಿನ ಕಾವೇರಿ ಅಸೋಸಿಯೇಷನ್ ಸಭಾಂಗಣದಲ್ಲಿ ಕೊಡವ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕೊಡವ ಮೇಳ ಪೂರ್ವಭಾವಿ ಸಭೆಯಲ್ಲಿ ಮೇಳದಲ್ಲಿ ನಡೆಸಲಿರುವ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಮಾಯಮುಡಿ ಸರಕಾರಿ ಪ್ರಾಥಮಿಕ, ಪ್ರೌಢಶಾಲಾ ಮೈದಾನದಲ್ಲಿ ತಾ. 24 ರಂದು ನಡೆಸಲಿರುವ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ 8 ಸಾಧಕರಿಗೆ ಸನ್ಮಾನ ಮಾಡುವ ಬಗ್ಗೆ ನಿರ್ಧರಿಸಲಾಯಿತು. ಮೇಳವನ್ನು ಅಚ್ಚುಕಟ್ಟಾಗಿ ನಡೆಸಲು ಗೋಣಿಕೊಪ್ಪ ಕೊಡವ ಸಮಾಜ, ಕೋಲ್‍ಬಾಣೆ ಕಾವೇರಿ ಅಸೋಸಿ ಯೇಷನ್, ಕಂಗಳತ್ತ್‍ನಾಡ್ ಮಹಿಳಾ ಸಮಾಜ, ಕಂಗಳತ್ತ್‍ನಾಡ್ ಅಮ್ಮ ಕೊಡವ ಸಂಘ ಸಹಯೋಗ ದಲ್ಲಿ ಮೇಳ ನಡೆಸುವಂತೆ ನಿರ್ಧರಿಸಲಾಯಿತು. ಈ ಸಂದರ್ಭ ಕೊಡವ ಮೇಳ ಸಂಚಾಲಕ ಆಪಟೀರ ಟಾಟು ಮೊಣ್ಣಪ್ಪ, ಗೋಣಿಕೊಪ್ಪ ಕೊಡವ ಸಮಾಜ ಅಧ್ಯಕ್ಷ ಚೆಕ್ಕೇರ ಸೋಮಯ್ಯ, ಕಾರ್ಯದರ್ಶಿ ಸಿ.ಡಿ. ಮಾದಪ್ಪ, ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸುಧೀರ್, ಉಪಾಧ್ಯಕ್ಷ ಕಾಳಪಂಡ ಟಿಪ್ಪು ಬಿದ್ದಪ್ಪ, ಅಕಾಡೆಮಿ ಸದಸ್ಯೆ ಆಂಗೀರ ಕುಸುಮ್ ಉಪಸ್ಥಿತರಿದ್ದರು.