ಕೂಡಿಗೆ, ಡಿ. 15: ಕೂಡಿಗೆ ಬಸವೇಶ್ವರ, ದಂಡಿನಮ್ಮ ದೇವಾಲಯ ಸಮಿತಿ ಅಧ್ಯಕ್ಷರಾಗಿ ಕೂಡಿಗೆ ಗ್ರಾಮದ ಕೆ.ಕೆ. ಸೋಮಶೇಖರ್ (ಮಂಜು) ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಕಾರ್ಯದರ್ಶಿಯಾಗಿ ಕೆ.ಸಿ. ಚಂದ್ರಶೇಖರ್, ಉಪಾಧ್ಯಕ್ಷರಾಗಿ ಗಿರೀಶ್, 15 ಮಂದಿ ನಿರ್ದೇಶಕರುಗಳು ಆಯ್ಕೆಗೊಂಡರು. ದೇವಾಲಯದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಪ್ರಕಿಯೆ ನಡೆಯಿತು. ಈ ಸಂದರ್ಭ ಕೂಡಿಗೆ, ಕೊಪ್ಪಲು, ಹೆಗ್ಗಡಳ್ಳಿ ವ್ಯಾಪ್ತಿಯ ಗ್ರಾಮಸ್ಥರು ಭಾಗವಹಿಸಿದ್ದರು.