ಮಡಿಕೇರಿ, ಡಿ. 15: ನಗರದ ಐಜಿ ವೃತ್ತ (ಚೌಕಿ)ದಲ್ಲಿ ಕುಡಿಯುವ ನೀರಿನ ಪೈಪ್‍ಲೈನ್ ಸಂಪರ್ಕ ಕೆಟ್ಟಿರುವ ಹಿನ್ನೆಲೆಯಲ್ಲಿ ನಗರ ಸಭೆಯಿಂದ ಪೈಪ್‍ಲೈನ್ ದುರಸ್ತಿ ಕಾರ್ಯಕೈಗೊಳ್ಳಲಾಗಿದ್ದು, ಜೆಸಿಬಿ ಮೂಲಕ ಗುಂಡಿ ತೆಗೆದು ಕಾಮಗಾರಿ ಆರಂಭಿಸಲಾಗಿದೆ. ಉಕ್ಕುಡ ರಸ್ತೆಯ ಅಗಲೀಕರಣಕ್ಕೆ ಇಂದು ಮಾರ್ಕಿಂಗ್ ಮಾಡಿರುವದಾಗಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ತಿಳಿಸಿದ್ದಾರೆ.