ಗೋಣಿಕೊಪ್ಪಲು, ಡಿ.15: ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪತ್ತಿನ ಸಹಕಾರ ಸಂಘ ಪೊನ್ನಂಪೇಟೆಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಮುದ್ದಿಯಡ ಡಿ.ಗಣಪತಿ (ಮಂಜು)

ಉಪಾಧ್ಯಕ್ಷರಾಗಿ ಪದಾರ್ಥಿ ಎಸ್ ಮಂಜುನಾಥ್ (ಮಂಜು)ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. 12 ಸಂಖ್ಯೆ ಬಲದ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿ ಚೋಡುಮಾಡ ಪಿ.ಶ್ಯಾಮ್, ಮಲ್ಲಮಾಡ ಎ.ಪ್ರಭುಪೂಣಚ್ಚ, ಮುದ್ದಿಯಡ ಎ.ಸೋಮಯ್ಯ, ಪುಳ್ಳಂಗಡ ಪವನ್, ಬೊಟ್ಟಂಗಡ ಎಸ್.ದಶಮಿ ದೇಚಮ್ಮ,ಮೂಕಳೇರ ಪಿ.ಶಾರದ, ಹೆಚ್.ಎಸ್.ತಮ್ಮಯ್ಯ, ಹಾಲುಮತದ ಎಂ.ಡಿಕ್ಕಿ, ಬಿಲ್ಲವರ ಎಸ್.ಚಂದ್ರಶೇಖರ್ (ರಾಜ),ಪುತ್ತಮನೆ ಜೀವನ್, ದೇವದಾಸ್, ಆಯ್ಕೆಗೊಂಡಿದ್ದರು. ಸಂಘದÀ ಸಭಾಂಗಣದಲ್ಲಿ ನಡೆದ ಚುನಾವಣೆಯನ್ನು ಚುನಾವಣಾಧಿಕಾರಿ ಸಿ.ಕೆ.ಭವಾನಿ, ಸಹಾಯಕ ಆಡಳಿತಾಧಿಕಾರಿ ಎಂ.ಎಸ್. ಮೋಹನ್, ನಡೆಸಿಕೊಟ್ಟರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಕಂಡು ಬಂದ ಹಿನ್ನೆಲೆಯಲ್ಲಿ ಬಿಜೆಪಿಯ ಕ್ಷೇತ್ರ ಸಮಿತಿಯ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಅಧ್ಯಕ್ಷತೆಯಲ್ಲಿ ಮುಂಜಾನೆ ಸಭೆ ಸೇರಿದ ಸದಸ್ಯರು ಹಾಗೂ ಪಕ್ಷದ ಪದಾಧಿಕಾರಿಗಳು 30 ತಿಂಗಳ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಒಂಡಂಬಡಿಕೆ ಮೂಲಕ ಒಮ್ಮತಕ್ಕೆ ಬರಲಾಯಿತು. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಸದಸ್ಯರು ಒಪ್ಪಿಗೆ ಸೂಚಿಸಿ ಮೊದಲ ಅವಧಿಗೆ ಅಧ್ಯಕ್ಷರಾಗಿ ಮುದ್ದಿಯಡ ಡಿ.ಗಣಪತಿ(ಮಂಜು) ಉಪಾಧ್ಯಕ್ಷರಾಗಿ ಪದಾರ್ಥಿ ಎಸ್ ಮಂಜುನಾಥ್ (ಮಂಜು)ಅವಿರೋಧವಾಗಿ ಆಯ್ಕೆಗೊಂಡರು. ನಿರ್ದೇಶಕರಾದ ಮಲ್ಲಮಾಡ ಎ.ಪ್ರಭುಪೂಣಚ್ಚ, ಪುಳ್ಳಂಗಡ ಪವನ್, ಚುನಾವಣೆ ಪ್ರಕ್ರಿಯೆಯಲ್ಲಿ ಗೈರಾಗಿದ್ದು ಕಂಡು ಬಂತು.

ವೀರಾಜಪೇಟೆ ಕ್ಷೇತ್ರದ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ತೀತಿಮಾಡ ಲಾಲಾಭೀಮಯ್ಯ, ಜಿಲ್ಲಾ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಪ್ರಧಾನ ಕಾರ್ಯದರ್ಶಿ ಸುವಿನ್ ಗಣಪತಿ,ತಾ.ಪಂ.ಉಪಾಧ್ಯಕ್ಷ ನೆಲ್ಲಿರ ಚಲನ್, ಜಿಲ್ಲಾ ಸಮಿತಿ ಸದಸ್ಯರಾದ ಕಿಲನ್ ಗಣಪತಿ, ತಾಲೂಕು ಉಪಾಧ್ಯಕ್ಷÀ್ಷ ಕುಂಬೇಯಂಡ ಗಣೇಶ್, ಕಾರ್ಯದರ್ಶಿ ಕಾಡ್ಯಮಾಡ ಭರತ್,ಪಕ್ಷದ ಹಿರಿಯರಾದ ಬೊಟ್ಟಂಗಡ ರಾಜ, ಪೊನ್ನಂಪೇಟೆ ಬಿಜೆಪಿ ಸ್ಥಾನೀಯ ಸಮಿತಿ ಕಾರ್ಯದರ್ಶಿ ಅಮ್ಮತ್ತೀರ ಸುರೇಶ್,ಪಕ್ಷದ ಮುಖಂಡರಾದ ಚೀರಂಡ ಕಂದಾ ಸುಬ್ಬಯ್ಯ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.