ಮಡಿಕೇರಿ, ಡಿ. 16: ಮಡಿಕೇರಿ ನಗರಸಭೆ ಅಧೀನದಲ್ಲಿರುವ ಮೂರು ಪ್ರಾಥಮಿಕ ಶಾಲೆಗಳ ಗೌರವ ಶಿಕ್ಷಕರುಗಳಿಗೆ ಮಾಸಿಕ ವೇತನ ನೀಡದಿರುವ ಹಿನ್ನೆಲೆಯಲ್ಲಿ ತಾ. 17 ರಂದು (ಇಂದು) ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸಮಾಜಮುಖಿ ಸಂಘಟನೆಗಳ ಸಹಕಾರದೊಂದಿಗೆ ‘ಗುರುದಕ್ಷಿಣೆಗಾಗಿ ನಡೆ’ ಆಂದೋಲನ ಹಮ್ಮಿಕೊಳ್ಳಲಾಗಿದೆ.ನಗರದ ಗದ್ದುಗೆ ಬಳಿಯಿಂದ ಬೆಳಿಗ್ಗೆ 11 ಗಂಟೆಗೆ ಮುಖ್ಯ ಬೀದಿಗಳಲ್ಲಿ ನಡಿಗೆಯೊಂದಿಗೆ ಗುರು ದಕ್ಷಿಣೆ ಸಂಗ್ರಹಿಸಿ ಹಿಂದೂಸ್ತಾನಿ ಶಾಲೆ, ಎ.ವಿ. ಶಾಲೆ, ಜಿ.ಟಿ. ರಸ್ತೆಯ ನಗರಸಭಾ ಶಾಲೆಗಳ ಗೌರವ ಶಿಕ್ಷಕರುಗಳಿಗೆ ಕಲ್ಪಿಸಲಾಗುವದು ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.