ವೀರಾಜಪೇಟೆ, ಡಿ. 17: ನಗರದ ನೆಹರುನಗರ ನವಜ್ಯೋತಿ ಯುವಕ ಸಂಘ ಅಯೋಜಿತ ಜಿಲ್ಲಾ ಮಟ್ಟದ ಪುರುಷರ ಟೈಗರ್ ಫೈ ಕಾಲ್ಚೆಂಡು ಪಂದ್ಯಾಟದ ಪಾರಿತೋಷಕವನ್ನು ಅಮ್ಮತ್ತಿಯ ಕ್ಯಾಂಪ್ ಬಾಯ್ಸ್ ತಂಡವು ತನ್ನದಾಗಿಸಿಕೊಂಡಿತು.

ಪಂದ್ಯಾಟದ ಸಮಾರೋಪ ಸಮಾರಂಭದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿಯ ಸದಸ್ಯರಾದ ಡಿ.ಪಿ. ರಾಜೇಶ್ ಪದ್ಮಾನಾಭ, ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯ ಮತ್ತು ಕ್ರೀಡಾ ಪಟು ಸಿ.ಕೆ. ಪ್ರಥ್ವಿನಾಥ್ ಮಾತನಾಡಿದರು.

ನವಜ್ಯೋತಿ ಯುವಕ ಸಂಘದ ಅಧ್ಯಕ್ಷರಾದ ಜನಾರ್ಧನಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಕುರಿತು ಜೆಡಿಎಸ್ ನಗರಾಧ್ಯಕ್ಷ ಪಿ.ಎ. ಮಂಜುನಾಥ್, ಭಾ,ಜ.ಪ ಮುಖಂಡ ಜೋಕಿಂ ರೋಡ್ರಿಗಸ್ ಪಟ್ಟಣ ಪಂಚಾಯಿತಿ ಸದಸ್ಯರಾದ ಮೊಹಮ್ಮದ್ ರಾಫಿ, ಉದ್ಯಮಿ ಬಿಲ್ಟನ್ ವಾಜ್, ಕಾಂಗ್ರೆಸ್ ಮುಖಂಡ ಎಜಾಸ್ ಅಹಮ್ಮದ್ ಮಾತನಾಡಿದರು.

ಪಂದ್ಯಾಟದಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯಾಟವು ಕ್ಯಾಂಪ್ ಬಾಯ್ಸ್ ಬಿ. ಮತ್ತು ನೆಹರು ಎಫ್.ಸಿ ಪಾಲಿಬೆಟ್ಟ ತಂಡಗಳ ಮಧ್ಯೆ ನಡೆದು ಟ್ರೈಬ್ರೇಕರ್‍ನಲ್ಲಿ 4-3 ಮುನ್ನಡೆ ಸಾಧಿಸಿದ ಕ್ಯಾಂಪ್ ಬಾಯ್ಸ್ ತಂಡ ವಿಜಯ ಮಾಲೆ ತನ್ನದಾಗಿಸಿಕೊಂಡಿತು. ಶೇಷಪ್ಪ ಮತ್ತು ಶ್ರೀನಿವಾಸ್ ಪಂದ್ಯಾಟದ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಉತ್ತಮ ಗೊಲು ಕೀಪರ್ ಪ್ರಶಸ್ತಿ ನೆಹರು ಎಫ್.ಸಿ ತಂಡದ ಮಣಿಕಂಠ ಪಡೆದುಕೊಂಡರೆ. ಸರಣಿ ಪಂದ್ಯಪುರುಷೋತ್ತಮ ಪ್ರಶಸ್ತಿ ಕ್ಯಾಂಪ್ ಬಾಯ್ಸ್ ತಂಡದ ಮುನ್ನಡೆ ಅಟಗಾರ ಸೀರಾಜ್ ಪಡೆದುಕೊಂಡರು.

-ಚಿತ್ರ ವರದಿ ಕೆ.ಕೆ.ಎಸ್ ವೀರಾಜಪೇಟೆ