ಸುಂಟಿಕೊಪ್ಪ, ಡಿ. 17 : ಮಕ್ಕಳು ಕ್ರೀಡೆ ಹಾಗೂ ವ್ಯಾಯಮಗಳನ್ನು ಶಾಲಾ ದಿನಗಳಿಗೆ ಮಾತ್ರ ಸಿಮೀತಗೊಳಿಸದೆ ದೈನಂದಿನ ಚಟುವಟಿಕೆಯಾಗಿ ಮುಂದುವರೆಸಿದ್ದಲ್ಲಿ ಉತ್ತಮ ಆರೋಗ್ಯವನ್ನು ಪಡೆಯಲು ಸಾದ್ಯವೆಂದು ರಿಲಯನ್ಸ್ ಇಂಡ್ರಸ್ಟೀಸ್ ಲಿಮಿಟೆಡ್ ನಿವೃತ್ತ ಉಪಾಧ್ಯಕ್ಷ ಕಾನೆಹಿತ್ಲು ಎಸ್. ಸತೀಶ್ ಕುಮಾರ್ ಹೇಳಿದರು.

ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಕ್ರೀಡಾಕೂಟ ಸಮಾರೋಪ ಸಮಾರಂಭದ ಬಹುಮಾನ ವಿತರಿಸಿ ಮಾತನಾಡಿದ ಅವರು ಮಕ್ಕಳು ಹೆಚ್ಚು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕವಾಗಿ ಶಕ್ತರಾಗುತ್ತಾರೆ. ನಾಯಕತ್ವದ ಗುಣಗಳು ವ್ಯಕ್ತಿಯಲ್ಲಿ ಬೆಳೆಸುವದಲ್ಲದೆ. ನಿರಂತರವಾಗಿ ಕ್ರೀಡೆ ವ್ಯಾಯಮದಿಂದ ಮನಸ್ಸು ಹತೋಟಿಯಲ್ಲಿ ಇರಲಿದೆ. ಮಕ್ಕಳು ಯಾವುದೇ ಹುದ್ದೆಗಳಿಗೆ ತೆರಳಿದರೂ ವ್ಯಾಯಮ ಕ್ರೀಡೆಯನ್ನು ಬಿಡಬಾರದು ಎಂದು ಕಿವಿಮಾತು ಹೇಳಿದರು.

ಸಮಾರೋಪದ ಸಮಾರಂಭದ ಅಧ್ಯಕ್ಷತೆಯನ್ನು ಕೊಡಗರಹಳ್ಳಿ ಎಜುಕೇಷನ್ ಸೊಸೈಟಿ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜನಾಥ್ ವಹಿಸಿದ್ದರು.

ಕೊಡಗರಹಳ್ಳಿ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷೆ ಮೀನಾ ಸೋಮಯ್ಯ, ಸದಸ್ಯ ಕುಟ್ಟಪ್ಪ, ಮುಖ್ಯೋಪಾದ್ಯಾಯನಿ, ಕೆ.ಎಸ್.ಇಂದಿರಾ ಇದ್ದರು.

ದಿನದ ಅಂಗವಾಗಿ ಮಕ್ಕಳಿಂದ ಮೊದಲಿಗೆ ಕವಾಯತ್ ನಂತರ ಮಕ್ಕಳು ಹಾಗೂ ಸಾರ್ವಜನಿಕರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.

ಮೊದಲಿಗೆ ಶಾಲಾ ಮಕ್ಕಳು ಪ್ರಾರ್ಥಿಸಿ, ಇಂದಿರಾ ಸ್ವಾಗತಿಸಿ, ವರದಿ ವಾಚಿಸಿ, ಗುರ್ಕಿ ಸ್ವಾಗತಿಸಿ ನಿರೂಪಿಸಿ, ರಮ್ಯ ಡಿಸೋಜ ವಂದಿಸಿದರು.