ಚೆಟ್ಟಳ್ಳಿ, ಡಿ. 17: ಹಿರಿಯ ಕಾರ್ಮಿಕ ನಿರೀಕ್ಷಕ, ಮಡಿಕೇರಿ ಕಚೇರಿಯಲ್ಲಿ ನೋಂದಣಿಯಾದ ಕಟ್ಟಡ ಕಾರ್ಮಿಕರಿಗೆ ಎಂ.ಹೆಚ್. ರಾಮಕೃಷ್ಣ, ಜಿಲ್ಲಾ ಕಾರ್ಮಿಕ ಅಧಿಕಾರಿರವರು ಗುರುತಿನ ಚೀಟಿಗಳನ್ನು ವಿತರಣೆ ಮಾಡಿದರು.

ಈ ಸಂದರ್ಭಎಂ.ಎಂ. ಯತ್ನಟ್ಟಿ, ಹಿರಿಯ ಕಾರ್ಮಿಕ ನಿರೀಕ್ಷಕರು ಯೋಜನೆಗಳ ಕುರಿತು ಕಟ್ಟಡ ಕಾರ್ಮಿಕರಿಗೆ ಮಾಹಿತಿ ನೀಡಿದರು. ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಆರ್. ಶಿರಾಜ್ ಅಹ್ಮದ್, ಡಾಟಾ ಎಂಟ್ರಿ ಆಪರೇಟರ್ ಜರಿನಾ ಮತ್ತು ಬಿ.ಎಂ.ಎಸ್. ಸಂಘದ ಮುಖಂಡ ಕುಮಾರ ಮತ್ತು ಕೆ.ಎಸ್. ಗಣೇಶ ಹಾಜರಿದ್ದರು.