ಸೋಮವಾರಪೇಟೆ, ಡಿ.17: ಇಲ್ಲಿನ ಕೊಡವ ಸಮಾಜದ ವತಿಯಿಂದ ತಾ. 23ರಂದು ಪೂರ್ವಾಹ್ನ 10.30ಕ್ಕೆ ಸಮಾಜದ ಸಭಾಂಗಣದಲ್ಲಿ ಪುತ್ತರಿ ಊರೊರ್ಮೆ ಕಾರ್ಯಕ್ರಮ ನಡೆಯಲಿದೆ ಎಂದು ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ತಿಳಿಸಿದ್ದಾರೆ.

ಕಾರ್ಯಕ್ರಮವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದು, ಸಂಸದ ಪ್ರತಾಪ್ ಸಿಂಹ, ಮಾದಾಪುರ ಚೆನ್ನಮ್ಮ ಜೂನಿಯರ್ ಕಾಲೇಜು ಪ್ರಾಂಶುಪಾಲ ಮಂದಪ್ಪ, ಕೊಡವ ಸಮಾಜದ ಮಾಜೀ ನಿರ್ದೇಶಕಿ ವಿಶಾಲಾಕ್ಷಿ ರಘು ಅವರುಗಳು ಭಾಗವಹಿಸಲಿದ್ದಾರೆ.

ಗರ್ವಾಲೆ ಬೊಟ್ಲಪ್ಪ ಸಂಘದಿಂದ ಬೊಳಕಾಟ್, ಕೋಲಾಟ್, ಮೂವತ್ತೊಕ್ಲು ಪೊಮ್ಮಕ್ಕಡ ಕೂಟದಿಂದ ಉಮ್ಮತ್ತಾಟ್, ಸೋಮವಾರಪೇಟೆ ಕೊಡವ ಸಮಾಜದಿಂದ ಮಕ್ಕಳ ಆಟ್ ಸೇರಿದಂತೆ ಸಮಾಜ ಬಾಂಧವರಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಇದರೊಂದಿಗೆ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವದು ಎಂದು ಅಭಿಮನ್ಯುಕುಮಾರ್ ಮಾಹಿತಿ ನೀಡಿದ್ದಾರೆ.