ಸುಂಟಿಕೊಪ್ಪ, ಡಿ.17 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಕೇಂದ್ರ ಸ್ಥಾನ ಕುಶಾಲನಗರ ವತಿಯಿಂದ ಮಹಿಳೆಯರಿಗೆ ಸೇವಾದಿನ ಕುರಿತು ಮಾಹಿತಿ ಕಾರ್ಯಗಾರ ನಡೆಸಲಾಯಿತು.
ಪ್ರಾ.ಆ..ಕೇಂದ್ರ ಸೂರ್ಲಬ್ಬಿಯ ಉಪಕೇಂದ್ರ, ಮಾದಾಪುರ ಎ ತೋಟದಲ್ಲಿ ಮಹಿಳೆಯರಿಗಾಗಿ ಸೇವಾ ದಿನ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಆನಂದ್, ಡಾ. ರವಿಕುಮಾರ್ ಹೆಚ್.ಕೆ. ಶಾಂತಿ ಮಾಹಿತಿ ನೀಡಿದರು.
ಡಾ|| ರಾಜ್ಕುಮಾರ್ ಸಹ ಶಿಕ್ಷಕ ಸುಲೈಮಾನ್, ಗಿರೀಶ್, ಸುಶೀ¯ (ಕಿ.ಆ.ಸ), ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಕಲಾ ತಂಡದವರು ಪಾಲ್ಗೊಂಡಿದ್ದರು.