ಮಡಿಕೇರಿ, ಡಿ. 17: ಷಷ್ಠಿ ಹಬ್ಬದ ಪ್ರಯುಕ್ತ ಇಲ್ಲಿನ ಓಂಕಾರೇಶ್ವರ ದೇವಸ್ಥಾನದಲ್ಲಿ ವೀರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ಗಳು ನೆರೆದಿದ್ದ ಭಕ್ತಾದಿಗಳಿಗೆ ಊಟ ಬಡಿಸುವದು, ದೇವಸ್ಥಾನದ ಹೊರಗೆ ಸ್ವಚ್ಛತೆಯನ್ನು ಕಾಪಾಡುವದರೊಂದಿಗೆ ಶಿಸ್ತಿನಿಂದ ಸೇವಾ ಕಾರ್ಯದಲ್ಲಿ ಭಾಗವಹಿಸಿ ಜನಮೆಚ್ಚುಗೆಗೆ ಪಾತ್ರರಾದರು. ರೋವರ್ಸ್ ಲೀಡರ್ ಮಂದೆಯಂಡ ವನಿತ್ಕುಮಾರ್, ಸ್ಕೌಟ್ಸ್-ಗೈಡ್ಸ್ ಕೊಡಗು ಜಿಲ್ಲಾ ಸಂಘಟಕಿ ದಮಯಂತಿ ಮಾರ್ಗದರ್ಶನದಲ್ಲಿ ನಡೆದ ಸೇವಾ ಶಿಬಿರದಲ್ಲಿ ಸುಮಾರು 20 ರೋವರ್ಸ್ ಮತ್ತು ರೇಂಜರ್ಸ್ಗಳು ಭಾಗವಹಿಸಿದ್ದರು.