ಸುಂಟಿಕೊಪ್ಪ, ಡಿ.17 : ಸೋಮವಾರಪೇಟೆ ಸಂತ ಜೋಸೆಫರ ಪದವಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವತಿಯಿಂದ ವಿಶೇಷ ವಾರ್ಷಿಕ ಶಿಬಿರವು ಯಡವಾರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು.

ದ್ವಜಾರೋಹಣವನ್ನು ಐಗೂರು ಗ್ರಾ.ಪಂ. ಪ್ರಭಾರ ಅಧ್ಯಕ್ಷೆ ಕೆ.ಪಿ. ಶೋಭಾ ಹಾಗೂ ಐಗೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಎಸ್. ಚಂಗಪ್ಪ ಮಾತನಾಡಿದರು. ಶಿಬಿರಾರ್ಥಿಗಳಿಗೆ ಕಾಲೇಜಿನ ಪ್ರಾಚಾರ್ಯ ರೆ.ಫಾ. ಟೆನ್ನಿ ಕುರಿಯನ್ ಪ್ರತಿಜ್ಞಾ ವಿಧಿ ಬೋಧಿಸಿದರು. ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಡಿ. ಜನಾರ್ಧನ ವಹಿಸಿದ್ದರು.

ಅಂತರಾಷ್ಟ್ರೀಯ ಹಾಕಿ ಆಟಗಾರ ಕೆ.ಪಿ.ರಾಯ್, ಮುಖ್ಯ ಶಿಕ್ಷಕ ವೈ.ಸಿ.ಕುಮಾರ್, ಎನ್‍ಎಸ್‍ಎಸ್ ಯೋಜನಾಧಿಕಾರಿ ಬಿ.ಜಿ.ಆನಂದ, ಸಹಶಿಬಿರಾಧಿಕಾರಿಗಳಾದ ಹರೀಶ್, ಶಿವಕುಮಾರ್, ಶೋಭ, ಛಾಯಾ, ಶಿಲ್ಪ, ಅನುಪಲ್ಲವಿ ಇತರರು ಇದ್ದರು.