ಗೋಣಿಕೊಪ್ಪ ವರದಿ, ಡಿ. 17 : ನಾಗರಿಕ ಸೇವೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಬಗ್ಗೆ ವಿದ್ಯಾರ್ಥಿ ಜೀವನದಲ್ಲಿಯೇ ಅಭ್ಯಾಸ ನಡೆಸಬೇಕು ಎಂದು ಡಾ. ಅರ್ಜುನ್ ಬೋಪಣ್ಣ ಅಭಿಪ್ರಾಯಪಟ್ಟರು.
ಪೊನ್ನಂಪೇಟೆ ಸಾಯಿಶಂಕರ್ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ವೃತ್ತಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ನಾಗರಿಕ ಸೇವೆ ಬಗ್ಗೆ ಹೆಚ್ಚು ಅರಿತುಕೊಳ್ಳುವ ಅವಶ್ಯಕತೆ ಇದೆ. ಇದರಲ್ಲಿ ಹುದ್ದೆಯ ರೂಪದಲ್ಲಿ ವೃತ್ತಿ ಗಿಟ್ಟಿಸುವದು, ಅದರಿಂದ ಸಾರ್ವಜನಿಕರು ಹಾಗೂ ವೃತ್ತಿ ಪಡೆದುಕೊಂಡವರಿಗೆ ದೊರೆಯುವ ಅವಕಾಶಗಳನ್ನು ಅರಿತುಕೊಳ್ಳಬೇಕು ಎಂದರು. ಈ ಬಗ್ಗೆ ಪರೀಕ್ಷೆ ಎದುರಿಸುವ ಬಗ್ಗೆ ಸಲಹೆ ನೀಡಿದರು. ಹೆಚ್ಚು ಸೇವೆ ನೀಡಲು ಅವಕಾಶವಿದೆ ಎಂದರು.
ದಿವ್ಯ ಕಾವೇರಪ್ಪ ಮಾತನಾಡಿ, ವಾಯುಯಾನದಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸಬೇಕಿದೆ. ವಿದ್ಯಾರ್ಥಿ ಜೀವನದಲ್ಲಿ ಇಂತಹ ಹುದ್ದೆ ಪಡೆಯಲು ನಿರ್ಧರಿಸಿಕೊಳ್ಳಬೇಕು ಎಂದರು.
ರಕ್ಷಣಾ ಸೇವೆಯಲ್ಲಿ ಪುರುಷರಂತೆ ಮಹಿಳೆಯರಿಗೂ ಸೇವೆ ಸಲ್ಲಿಸಲು ಅವಕಾಶವಿದೆ. ಇದನ್ನು ಅರಿತು ರಕ್ಷಣಾ ಸೇವೆಯಲ್ಲಿ ಉದ್ಯೋಗ ಪಡೆಯಲು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂಧು ಕ್ಯಾಪ್ಟನ್ ಪಟ್ಟಡ ಕಾರ್ಯಪ್ಪ ಸಲಹೆ ನೀಡಿದರು. ಈ ಬಗ್ಗೆ ಪೋಷಕರು ಹೆಚ್ಚು ಮುತುವರ್ಜಿವಹಿಸಬೇಕು ಎಂದರು.
ಸರ್ಕಾರಿ ಸೇವೆಯ ಗ್ರೂಪ್, ಬಿ, ಗ್ರೂಪ್ ಸಿ, ಹುದ್ದೆ ಪಡೆಯಲು ಮಾಧ್ಯಮಗಳ ಮೂಲಕ ಮಾಹಿತಿ ಪಡೆದುಕೊಂಡು ಮುಂದುವರಿ ಯುವಂತೆ ಸಿ.ಯು. ಪೂಣಚ್ಚ ಸಲಹೆ ನೀಡಿದರು.
ಈ ಸಂದರ್ಭ ಸಾಯಿ ಶಂಖರ್ ವಿದ್ಯಾ ಸಂಸ್ಥೆ ಅಧ್ಯಕ್ಷ ಝರುಗಣಪತಿ, ನಿರ್ದೇಶಕ ಅರಮಣಮಾಡ ಸತೀಶ್ ಕಾಲೇಜು ಪ್ರಾಂಶುಪಾಲ ಬೊಟ್ಟಂಗಡ ದಶಮಿ, ಬಿಎಎಡ್ ವಿಭಾಗದ ಪ್ರಾಂಶುಪಾಲ ನಾರಾಯಣ, ಶಾಲಾ ಮುಖ್ಯ ಶಿಕ್ಷಕ ಟಿ.ಕೆ. ತಿಮ್ಮಯ್ಯ ಉಪಸ್ಥಿತರಿದ್ದರು.