ಮಡಿಕೇರಿ, ಡಿ. 17: ಕೊಡಗು ಜಿಲ್ಲಾ ಮದನೀಸ್ ಅಸೋಸಿಯೇಶನ್‍ನ ಆಶ್ರಯದಲ್ಲಿ ಧರ್ಮಗುರು ತಾಜುಲ್ ಉಲಮಾ ಬಳ್ಳಾಲ ತಂಙಳ್ ಅವರ ಅನುಸ್ಮರಣೆ ಹಾಗೂ ದ್ಸಿಕ್ರ್‍ದುಆ ಮಜ್ಲಿಸ್ ತಾ. 18 ರಂದು (ಇಂದು) ಬೆಳಿಗ್ಗೆ 10-30ಕ್ಕೆ ಹಾಕತ್ತೂರಿನ ಶಾದಿ ಮಹಲ್‍ನಲ್ಲಿ ನಡೆಯಲಿದೆ. ಕಿಲ್ಲೂರು ಶಿಹಾಬುದ್ಧೀನ್ ತಂಙಳ್, ಇಲ್ಯಾಸ್ ತಂಙಳ್, ಅಬೂಷುಫ್ಯಾನ್‍ಮದನಿ, ಕೆ. ಎ. ಮಹಮೂದ್ ಮುಸ್ಲಿಯಾರ್ ಮುಂತಾದವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್‍ಮದನಿ ತಿಳಿಸಿದ್ದಾರೆ.