ಮಡಿಕೇರಿ, ಡಿ. 17: ಮೂರ್ಯಾಡ್ ದಾರುಲ್ ಹಿದಾಯ ದರ್ಸಿನ 44ನೇ ವಾರ್ಷಿಕ ಮಹಾ ಸಮ್ಮೆಳನದ ಪ್ರಚಾರ ಹಾಗೂ ಶರೀಅತ್ ಕಾಲಿಕ ವೀಕ್ಷಣೆ’ ಎಂಬ ಏಕದಿನ ಅಧ್ಯಯನ ಶಿಬಿರವನ್ನು ಹಿದಾಯ ದರ್ಸಿನ ಕೊಡಗು ಜಿಲ್ಲೆಯ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ತಾ. 18 ರಂದು (ಇಂದು) ಸುಂಟಿಕೊಪ್ಪದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸದಸ್ಯ ಎಂ.ಎ. ಅಶ್ರಫ್ ಮಿಸ್ಬಾಹಿ, ಕಣ್ಣೂರಿನ ಮೂರ್ಯಾಡ್ ಎಂಬ ಪ್ರದೇಶದಲ್ಲಿ 1974 ರಲ್ಲಿ ಶೈಖುನಾ ಟಿ ಹಂಝ ಮುಸ್ಲಿಯಾರ್ ನೇತೃತ್ವದಲ್ಲಿ ಸ್ಥಾಪಿತವಾದ ‘ದರ್ಸ್ ಧಾರ್ಮಿಕ ವಿದ್ಯಾಕೇಂದ್ರ ಮೂರ್ಯಾಡ್ ದಾರುಲ್ ಹಿದಾಯ ದರ್ಸ್‍ನ 44ನೇ ವಾರ್ಷಿಕ ಮಹಾ ಸಮ್ಮೇಳನವು ಜ. 4, 5, 6 ರಂದು ಮೂರ್ಯಾಡಿನಲ್ಲಿ ನಡೆಯಲಿದೆ ಎಂದರು.

ಪ್ರಚಾರ ಸಮ್ಮೇಳನ ಹಾಗೂ ಶರೀಅತ್ ಕಾಲಿಕ ವೀಕ್ಷಣೆ ಎಂಬ ವಿಷಯದಲ್ಲಿ ಏಕದಿನ ಅಧ್ಯಯನ ಶಿಬಿರವು ದರ್ಸಿನ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಸುಂಟಿಕೊಪ್ಪದ ಮುಹಮ್ಮದ್ ಅಲಿ ಶಿಹಾಬ್ ತಂಙÐಳ್ ಜೂನಿಯಾರ್ ಅರೆಬಿಕ್ ಕಾಲೇಜ್‍ನಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷ ಬಹು ಶೈಖುನಾ ಉಮ್ಮರ್ ಬಾಖವಿ ಕೀಶೇರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸಮಸ್ತ ಕೇರಳದ ಜಂಇಯ್ಯತುಲ್ ಉಲಮಾದ ಕಾರ್ಯದರ್ಶಿ ಶೈಖುನಾ ಕೊಯ್ಯೋಡ್ ಉಮ್ಮರ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ.

ಎಸ್.ವೈ.ಎಸ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಖ್ಯಾತ ಭಾಷಣಕಾರ ಅಬ್ದುಸ್ಸಮದ್ ಪೂಕೋಟೂರ್ ಮುಖ್ಯ ಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ನಾಯಿಬ್ ಖಾಝಿ ಅಬ್ದುಲ್ಲ ಫೈಝಿ, ಪೂರ್ವ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಎ.ಸಿ. ಉಸ್ಮಾನ್ ಫೈಝಿ, ಮಾಜಿ ಎಂಎಲ್‍ಎ ಕೆ.ಎಂ. ಇಬ್ರಾಹಿಂ, ಶರಿಅತ್ ಕಾಲೇಜಿನ ಪ್ರಾಂಶುಪಾಲ ಝೈನುದ್ದೀನ್ ಫೈಝಿ, ಸಿದ್ದಾಪುರದ ಜಮಾಅತ್ ಅಧ್ಯಕ್ಷ ಕೆ. ಉಸ್ಮಾನ್ ಹಾಜಿ, ಸುಂಟಿಕೊಪ್ಪ ಜಮಾಅತ್ ಅಧ್ಯಕ್ಷ ಹಸ್ಸನ್ ಕುಂಞ ಹಾಜಿ, ಕಾರ್ಯದರ್ಶಿ ಸೂಫಿ, ಕೋಶಾಧಿಕಾರಿ ಮುಹಮ್ಮದ್ ಭಾಗವಹಿಸಲಿದ್ದಾರೆ.

ಅಂದು ಮದ್ಯಾಹ್ನ 2 ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಚೀಫ್ ಕನ್ವೀನರ್ ಅಬ್ದುರಹ್ಮಾನ್ ಫೈಝಿ ಪಾದಿರಮಣ್ಣ ನಸೀಹತ್ ನೀಡಲಿದ್ದು, ಶೈಖುನಾ ಮೂರ್ಯಾಡ್ ಉಸ್ತಾದರ ನೇತೃತ್ವದಲ್ಲಿ ದ್ಸಿಕ್ರ್ ದುಆ ಮಜ್ಲಿಸ್ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕೋಶಾಧಿಕಾರಿ ವೈ.ಎಮ್. ಉಮ್ಮರ್ ಫೈಝಿ, ಸದಸ್ಯರುಗಳಾದ ಎ.ಎಮ್. ಮಜೀದ್ ಫೈಝಿ, ಎಂ.ಎಸ್. ರಫೀಖ್, ಬಿ.ಎಂ. ತೌಫೀಖ್ ದಾರಿಮಿ ಹಾಗೂ ಎ.ಸಿ. ಹಾರಿಸ್ ಮುಸ್ಲಿಯಾರ್ ಉಪಸ್ಥಿತರಿದ್ದರು.