ಕೂಡಿಗೆ, ಡಿ. 17 : ಗ್ರಾ.ಪಂ ವ್ಯಾಪ್ತಿಯ ಮಹಿಳಾ ಗ್ರಾಮ ಸಭೆಯು ಗ್ರಾ.ಪಂ ಅಧ್ಯಕ್ಷೆ ಪ್ರೇಮಲೀಲಾರವರ ಅಧ್ಯಕ್ಷತೆಯಲ್ಲಿ ಶ್ರೀ ಸದ್ಗುರು ಅಪ್ಪಯ್ಯ ಪ್ರೌಢÀಶಾಲಾ ಆವರಣದಲ್ಲಿ ನಡೆಯಿತು. ಮಹಿಳಾ ದೌರ್ಜನ್ಯ ತಡೆಯುವಿಕೆಯ ಬಗ್ಗೆ ಕುಶಾಲನಗರ ವಕೀಲ ಸಂಘದ ಕಾರ್ಯದರ್ಶಿ ಕೆ. ಬಿ. ಮೋಹನ್ ಸವಿಸ್ತಾರವಾಗಿ ಮಾಹಿತಿ ನೀಡಿದರು. ದಿಶಾ ಉದ್ಯಮ ಶೀಲತಾಭಿವೃದ್ಧಿ ಪ್ರೇರಣೆ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ ಶೀಲತೆಗೆ ಸಂಬಂಧಿಸಿದಂತೆ ಜಿಲ್ಲಾಮಟ್ಟದ ಅಧಿಕಾರಿ ರಮೇಶ್ ಮಾಹಿತಿ ನೀಡಿದರು. ಮಹಿಳೆಯರು ತಮ್ಮ ತಮ್ಮ ಸಮಸ್ಯೆಗಳನ್ನು ಸಭೆಯಲ್ಲಿ ಹೇಳಿಕೊಂಡು ಪರಿಹಾರ ಕಂಡುಕೊಳ್ಳುವ ಬಗ್ಗೆ ಮಾಹಿತಿ ಪಡೆದುಕೊಂಡರು.