ಕೂಡಿಗೆ, ಡಿ. 17: ಪ್ರಕೃತಿ ವಿಕೋಪದಿಂದಾಗಿ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ನಷ್ಟವಾಗಿತ್ತು. ಕಂದಾಯ ಇಲಾಖೆ ಮೂಲಕ ಚೆಕ್ ಅನ್ನು ನೀಡಲಾಗಿತ್ತು. ಆದರೆ ಇನ್ನು ಉಳಿದ ಹಣ ಲಭ್ಯ ವಿರುವದಿಲ್ಲ ಎಂದು ಈ ಭಾಗದ ಗ್ರಾಮಸ್ಥರು ದೂರಿದ್ದಾರೆ. ನಿತ್ಯ ಕಚೇರಿಗಳಿಗೆ ಅಲೆಯುವಂತಾಗಿದೆ ಎಂದು ಅಳಲು ತೋಡಿಕೊಂಡಿ ದ್ದಾರೆ.