ಮಡಿಕೇರಿ, ಡಿ. 17 : ಆರ್ಟ್ ಆಫ್ ಲಿವಿಂಗ್, ರಾಮಾಂಜನೇಯ ಭಜನಾ ಮಂಡಳಿ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಆಶ್ರಯದಲ್ಲಿ ತಾ. 19 (ನಾಳೆ) ರಂದು ಸಂಜೆ 5 ರಿಂದ 7 ಗಂಟೆಯ ತನಕ; ಓಂಕಾರ ಸದನದಲ್ಲಿ ಗೀತಾ ಜಯಂತಿ ಏರ್ಪಡಿಸಲಾಗಿದೆ.

ಈ ಪ್ರಯುಕ್ತ ಭಜನೆ ಹಾಗೂ ಆರ್ಟ್ ಆಫ್ ಲಿವಿಂಗ್‍ನ ಸ್ವಾಮಿ ಸೂರ್ಯಾಪಾದ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಭಗವದ್ಗೀತೆ ಉಪನಿಷತ್ ಹಾಗೂ ವೇದಗಳ ವಿಚಾರಧಾರೆಯೊಂದಿಗೆ ಗೀತಾ ಜಯಂತಿ ಮಹತ್ವವನ್ನು ಸೂರ್ಯಪಾದರು ತಮ್ಮ ಉಪನ್ಯಾಸದಲ್ಲಿ ವಿವರಿಸಲಿದ್ದಾರೆ.