ಗೋಣಿಕೊಪ್ಪ ವರದಿ, ಡಿ. 17: ಆಯುಷ್ ಇಲಾಖೆ ವತಿಯಿಂದ ಕೆ. ಬಾಡಗ ಗ್ರಾಮದ ಒಂದನೇ ನಾಣಚ್ಚಿ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಮನೆ ಮದ್ದು ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಜನರು ಪಾಲ್ಗೊಂಡು ತಪಾಸಣೆ ಮಾಡಿಸಿಕೊಂಡರು.
ಆದಿವಾಸಿಗಳು ಹೆಚ್ಚಾಗಿ ಪಾಲ್ಗೊಂಡು ಶಿಬಿರದ ಲಾಭ ಪಡೆದುಕೊಂಡರು. ಈ ಸಂದರ್ಭ ತಪಾಸಣೆ ನಡೆಸಿ ಸಲಹೆ ನೀಡಲಾಯಿತು. ಇಲಾಖೆಯಿಂದ ಔಷಧಿ ನೀಡಲಾಯಿತು. ಆದಿವಾಸಿ ಸಣ್ಣಯ್ಯ ಶಿಬಿರ ಉದ್ಘಾಟಿಸಿದರು. ಈ ಸಂದರ್ಭ ಆಶಾ ಕಾರ್ಯಕರ್ತರು, ಕೆ. ಬಾಡಗ ಗ್ರಾಮ ಪಂಚಾಯಿತಿ ಸದಸ್ಯರುಗಳು ಪಾಲ್ಗೊಂಡಿದ್ದರು. ಆಯುಷ್ ಇಲಾಖೆ ತಾಲೂಕು ಅಧಿಕಾರಿ ಶ್ರೀನಿವಾಸ್, ಹೋಬಳಿ ಅಧಿಕಾರಿ ವಿಶ್ವತಿಲಕ್, ಒಂದನೇ ನಾಣಚ್ಚಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಚೇಂದಿರ ಕಾವೇರಮ್ಮ ಪಾಲ್ಗೊಂಡಿದ್ದರು.