ಶಿ
ಕೂಡಿಗೆ, ಡಿ. 17: ಇಲ್ಲಿಗೆ ಸಮೀಪದ ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೂತನ ಅಧ್ಯಕ್ಷರಾಗಿ ಶಿರಂಗಾಲ ಗ್ರಾಮದ ಸಾಲಗಾರ ಕೇತ್ರದಿಂದ ಅಯ್ಕೆಗೊಂಡಿದ ಎಸ್.ಎಸ್. ಚಂದ್ರಶೇಖರ್ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡರು.
ಉಪಾಧ್ಯಕ್ಷರಾಗಿ ಪಿ.ಸಿ. ಬೇಲಯ್ಯ ಅವಿರೋಧವಾಗಿ ಅಯ್ಕೆಗೊಂಡರು. ಈ ಸಂದರ್ಭ ನೂತನ ಸಾಲಿನಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ಸಿ.ಎನ್. ಲೋಕೇಶ್, ಎಸ್.ಯು. ವೀರಭದ್ರಪ್ಪ, ಎಸ್.ಸಿ. ರುದ್ರಪ್ಪ, ಎನ್.ಎಸ್. ರಮೇಶ್, ಎನ್.ಎನ್. ಧರ್ಮಪ್ಪ, ಟಿ.ಡಿ. ಅನುಪಮ, ಎಸ್.ಎ. ನಾಗಮ್ಮ, ಎಸ್.ಬಿ. ರವಿ, ಎಸ್.ಎಸ್. ಕೃಷ್ಣ ಅವರು ಅಧ್ಯಕ್ಷರ ಚುನಾವಣಾ ಸಂದರ್ಭ ಹಾಜರಿದ್ದರು. ಚುನಾವಣಾ ಅಧಿಕಾರಿಯಾಗಿ ಸಹಕಾರದ ಅಧಿಕಾರಿ ರಘು ಹಾಗೂ ತೊರೆನೂರು ಸಹಕಾರ ಸಂಘ ಮುಖ್ಯ ಕಾರ್ಯದರ್ಶಿ ಜೀವನ್ ಇದ್ದರು.
ಶಿರಂಗಾಲದಲ್ಲಿ ಇದೆ ಪ್ರಥಮವಾಗಿ ಪ್ರಾರಂಭಗೊಂಡಿರುವ ಸಹಕಾರ ಸಂಘವಾಗಿದೆ. ಅಧ್ಯಕ್ಷರು, ನಿರ್ದೇಶಕರು ಸೇರಿದಂತೆ ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದರು.