ಸುಂಟಿಕೊಪ್ಪ, ಡಿ. 17: ಇತ್ತೀಚೆಗೆ ನಡೆದ ಸೋಮವಾರಪೇಟೆ ಶಿಕ್ಷಣ ಇಲಾಖೆಯ ವತಿಯಿಂದ ವಿಶ್ವ ವಿಶೇಷಚೇತನರ ದಿನಾಚರಣೆಯ ಪ್ರಯುಕ್ತ ವಿಶೇಷಚೇತನರಿಗಾಗಿ ಕ್ರೀಡಾಕೂಟವನ್ನು ಏರ್ಪಡಿಸ ಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಶೇಷಚೇತನರ ಏಳಿಗಾಗಿ ದುಡಿದ ಐದು ಮಂದಿಗೆ ಸನ್ಮಾನಿಸಲಾಯಿತು.
ಸ್ವಸ್ಥ ಶಾಲೆಯ ಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮದ ಸಂಯೋಜಕ ಮುರುಗೇಶ, ವಿಶೇಷಚೇತನರ ಕಲ್ಯಾಣ ಇಲಾಖೆಯ ಹರೀಶ್, ತಾಲೂಕು ವಿಶೇಷಚೇತನರ ಸಂಘದ ಅಧ್ಯಕ್ಷ ಸಂಗಮೇಶ್, ಪೋಷಕರಾದ ರತ್ನಮ್ಮ ಹಾಗೂ ಡಯಟ್ನ ಶಾಂತಕುಮಾರ್ ಇವರನ್ನು ಸನ್ಮಾನಿಸಲಾಯಿತು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ತಂಗಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್. ಮಂಜುನಾಥ್, ಪ್ರಮುಖರುಗಳಾದ ಟಿ.ಕೆ. ಬಸವರಾಜು, ಸಿ. ಕೆ. ಶಿವಕುಮಾರ್, ಐಇಆರ್ಟಿ ವೆಂಕಟೇಶ್ ಇತರರು ಉಪಸ್ಥಿತರಿದ್ದರು.