ಸುಂಟಿಕೊಪ್ಪ, ಡಿ. 17: ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆ ಯಲ್ಲಿ ಶಿಕ್ಷಣ ಪಡೆದು ತೆರಳಿರುವ ಹಳೆಯ ವಿದ್ಯಾರ್ಥಿಗಳು ತಮಗೆ ವಿದ್ಯೆಯನ್ನು ಕಲಿಸಿದ ಗುರುಗಳನ್ನು ಬಹಳಷ್ಟು ವರ್ಷಗಳ ನಂತರ ನೋಡುವ ಮತ್ತು ಈ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಒಂದೆಡೇ ಸೇರಿಸಿ ತಾವು ಕಳೆದುಹೋದ ಹಳೆಯ ನೆನಪುಗಳನ್ನು ಮೆಲುಕು ಹಾಕುವ ದಿಸೆಯಲ್ಲಿ ತಾ.19ರಂದು ಅಪರಾಹ್ನ 2.30 ಗಂಟೆಗೆ ಜಿಯಂಪಿ ಶಾಲಾ ಮೈದಾನದಲ್ಲಿ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಎಸ್. ಸುನೀಲ್ ಪ್ರದಾನ ಕಾರ್ಯದರ್ಶಿ ಡೆನಿಸ್ ಡಿಸೋಜ ಹೇಳಿದರು.
1981 ರಿಂದ 2018 ರವರೆಗೆ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿ ಜಿಲ್ಲೆ, ರಾಜ್ಯ ಮತ್ತು ಹೊರದೇಶಗಳಲ್ಲಿ ಉದ್ಯೋಗಗಳ ಲ್ಲಿದ್ದು ಸ್ನೇಹಿತರನ್ನು ಜೊತೆಗೂಡಿ ಸುವ ಸಣ್ಣ ಪ್ರಯತ್ನ ನಮ್ಮದಾಗಿದೆ.
ಸಂಘದ ಖಜಾಂಚಿ ಆರ್.ಹೆಚ್. ಶರೀಫ್ ಮಾತನಾಡಿ, 1981 ರಿಂದ 2018 ರವರೆಗೆ ಸೇವೆ ಸಲ್ಲಿಸಿದ ಶಿಕ್ಷಕರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಹೆಚ್ಚಿನ ಶಿಕ್ಷಕರು ಆಗಮಿಸಲಿದ್ದಾರೆ. ಹಾಗೆಯೇ ಎಲ್ಲ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಆಗಮಿಸಿ ಯಶಸ್ವಿಗೊಳಿಸಬೇಕು ಎಂದರು.
ಸಿ.ಎಂ. ಮಹಮ್ಮದ್ ಶರೀಫ್ ಮಾತನಾಡಿ, ಮದ್ಯಾಹ್ನ 2.30ಕ್ಕೆ ಸರಿಯಾಗಿ ಸಮ್ಮಿಲನ ಕಾರ್ಯಕ್ರಮ ನಡೆಯಲಿದ್ದು, ಸಮಯಕ್ಕೆ ಸರಿಯಾಗಿ ಆಗಮಿಸಬೆಕು ಎಂದು ಮನವಿ ಮಾಡಿಕೊಂಡರು.
ಹೆಚ್ಚಿನ ಮಾಹಿತಿಗಾಗಿ 8904040640 ವಾಟ್ಸಫ್ ಗ್ರೂಪ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೇಳಿಕೊಂಡರು. ಅಧ್ಯಕ್ಷ ಸುನಿಲ್, ಉಪಾಧ್ಯಕ್ಷ ಅಬ್ದುಲ್ ರಜಾಕ್, ನಿರಂಜನ್, ಮಹಮ್ಮದ್ ಆಲಿ ಇದ್ದರು.