ಮಡಿಕೇರಿ, ಡಿ. 18: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕೊಡವ ವiಕ್ಕಡ ಕೂಟ ಹಾಗೂ ನಾಪೋಕ್ಲು ಅಂಕೂರ್ ಪಬ್ಲಿಕ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ 4ನೇ ವರ್ಷದ ಕುಂಞÂಯಡ ಕೊಡವ ಜನಪದ ಸಾಂಸ್ಕøತಿಕ ನಮ್ಮೆಯನ್ನು ತಾ. 20 ರಂದು ಅಂಕೂರ್ ಪಬ್ಲಿಕ್ ಶಾಲೆಯಲ್ಲಿ ನಡೆಸಲಾಗುವದು ಎಂದು ಕಾರ್ಯಕ್ರಮದ ಸಂಚಾಲಕ ಬೊಳ್ಳಜಿರ ಬಿ. ಅಯ್ಯಪ್ಪ ತಿಳಿಸಿದ್ದಾರೆ.
ಪೂರ್ವಾಹ್ನ 9 ಗಂಟೆಗೆ ಕÀರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆಲಿರುವ ಕಾರ್ಯಕ್ರಮವನ್ನು ಮಾಜಿ ಸಚಿವ ಮೇರಿಯಂಡ ಸಿ. ನಾಣಯ್ಯ ಉದ್ಘಾಟಿಸಲಿರುವರು.
ಮುಖ್ಯ ಅತಿಥಿಗಳಾಗಿ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಅಂಕೂರ್ ಎಜುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಕೇಟೋಳಿರ ರಾಜ ಚರ್ಮಣ ಮೊದ ಲಾದವರು ಭಾಗವಹಿಸಲಿರುವರು.
ಪೂರ್ವಾಹ್ನ 11.30 ರಿಂದ ಅಪರಾಹ್ನ 3.30 ರವರೆಗೆ ಸಾಂಸ್ಕøತಿಕ ಪೈಪೋಟಿ ನಡೆಯಲಿದೆ.
ಕೊಡವ ಜನಪದ ಕ್ಷೇತ್ರದ ಸಾಧನೆಗಾಗಿ ಚಿರೋಟಿರ ತಮ್ಮಯ್ಯ (ಪೇರೂರ್), ಬಾಳೆಯಡ ಉತ್ತಪ್ಪ (ನೆಲಜಿ), ಕೈಬುಲಿರ ಸುಬ್ಬಯ್ಯ (ನೆಲಜಿ), ಕುಂಡ್ಯೋಳಂಡ ಸುಬ್ಬಯ್ಯ (ಕೊಳಕೇರಿ), ಚಿಯಕಪೂವಂಡ ದೇವಯ್ಯ (ನಾಪೋಕ್ಲು), ನಾಪನೆರವಂಡ ಸೋಮಯ್ಯ (ನೆಲಜಿ), ಬೊಪ್ಪಂಡ ಬೊಳ್ಳಮ್ಮ (ನಾಪೋಕ್ಲು) ಹಾಗೂ ಬೊಳ್ಳಂಡ ದೇವಯ್ಯ (ಕೈಕಾಡ್) ಇವರುಗಳನ್ನು ಸನ್ಮಾನಿಸಲಾಗುವದು.
ಸಂಜೆ 4 ಗಂಟೆಗೆ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಭಾಗಮಂಡಲ ತಲಕಾವೇರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಮೈಸೂರಿನ ಹಿರಿಯ ವಕೀಲ ಪಾಂಡಂಡ ಡಿ. ಮೇದಪ್ಪ, ಸಮಾಜ ಸೇವಕ ಬೊಟ್ಟೋಳಂಡ ಮಿಟ್ಟು ಚಂಗಪ್ಪ, ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮೊದಲಾದವರು ಭಾಗವಹಿಸಲಿರುವರು.
8 ರಿಂದ 10ನೇ ತರಗತಿಯ ಮಕ್ಕಳಿಗೆ ಹಾಗೂ 1 ರಿಂದ 7ನೇ ತರಗತಿಯ ಮಕ್ಕಳಿಗೆ ಬೊಳಕಾಟ್, ಕೋಲಾಟ್, ಕೊಡವ ನಾಟಕ, ಉಮ್ಮತಾಟ್, ಸಂಬಂಧ ಅಡ್‍ಕ್‍ವ, ಕೊಡವ ಪಾಟ್, ಕವಿಗೋಷ್ಠಿ ಸ್ಪರ್ಧೆಏರ್ಪಡಿಸಲಾಗಿದೆ. ಪ್ರತೀ ಸ್ಪರ್ಧೆಗೂ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನದ ಜೊತೆಗೆ ಎರಡು ವಿಭಾಗದಲ್ಲಿ ವಿಜೇತ ಶಾಲೆಗಳಿಗೆ ಚಾಂಪಿಯನ್ ಬಹುಮಾನ ನೀಡಲಾಗುವದು ಎಂದು ತಿಳಿಸಿದ್ದಾರೆ.