ಮಡಿಕೇರಿ, ಡಿ. 18: ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಶನ್ ವತಿಯಿಂದ ಶಿವಮೊಗ್ಗದ ನೆಹರು ಸ್ಟೆಡಿಯಂನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಯ ಕ್ರೀಡಾಪಟು ಎಡಿಕೇರಿ ವಿಶಾಲಾಕ್ಷಿ 5000 ಮೀ. ವೇಗದ ನಡಿಗೆಯಲ್ಲಿ ಚಿನ್ನದ ಪದಕ, 800 ಮೀ. ಓಟದಲ್ಲಿ ಬೆಳ್ಳಿ ಹಾಗೂ ಜಾವಲಿನ್ ಥ್ರೋದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಫೆಬ್ರವರಿಯಲ್ಲಿ ಮಹಾರಾಷ್ಟ್ರದ ನಾಸಿಕ್‍ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ವಿಶಾಲಾಕ್ಷಿ ಅವರು ಮಡಿಕೇರಿಯಲ್ಲಿ ಗೃಹ ರಕ್ಷಕ ದಳದಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ.