ಗೋಣಿಕೊಪ್ಪಲು,ಡಿ.18: ಕಾಡಾನೆ ಉಪಟಳ, ಹುಲಿ ಹಾವಳಿ ಸೇರಿದಂತೆ ಕಾಡುಪ್ರಾಣಿಗಳಿಂದ ರೈತರು ಬೆಳೆದ ಬೆಳೆಗಳ ನಷ್ಟದ ಬಗ್ಗೆ ಅರಣ್ಯ ಇಲಾಖೆಯು ನೀಡುವ ಪರಿಹಾರ ವಿಳಂಬ ನೀತಿಯ ಬಗ್ಗೆ ಪ್ರತಿಭಟಿಸಿದ ರೈತರು ತಮ್ಮ ನೋವುಗಳನ್ನು ಹಿರಿಯ ಅರಣ್ಯ ಅಧಿಕಾರಿಗಳ ಮುಂದೆ ಮಂಡಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು. ಗ್ರಾಮೀಣ ಪ್ರದೇಶ ತಿತಿಮತಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಕೊಡಗು ಜಿಲ್ಲಾ ಘಟಕದ ರೈತ ಮುಖಂಡರು, ಸದಸ್ಯರು ಹಾಗೂ ಹಿರಿಯ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಯಿತು. ಆರಂಭದಲ್ಲಿ ಅರಣ್ಯ ಇಲಾಖೆಯ ಸುತ್ತೋಲೆಯಿಂದ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸುತ್ತೋಲೆಯನ್ನು ಹಿರಿಯ ವಕೀಲರಾದ ಹೇಮಚಂದ್ರ ಅವರು ಸುಡುವದರ ಮೂಲಕ ಪ್ರತಿಭಟಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ತಿತಿಮತಿಯ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ ರೈತ ಮುಖಂಡರು ಹಲವು ಸಮಯದಿಂದ ರೈತರು ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಹಿರಿಯ ಅರಣ್ಯ ಅಧಿಕಾರಿಗಳ ಮುಂದೆ ಬಿಚ್ಚಿಟ್ಟರು. ದ.ಕೊಡಗಿನ ಬಹುತೇಕ ಭಾಗದಲ್ಲಿ ಕಾಡಾನೆಯ ಹಿಂಡಿನಿಂದ ಆಗುತ್ತಿರುವ ಪ್ರಾಣಹಾನಿ, ಬೆಳೆ ಹಾನಿಯ ಬಗ್ಗೆ ಗಂಭೀರ ಚರ್ಚೆ ನಡೆದವು. ಕೊಡಗು ಜಿಲ್ಲಾ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
(ಮೊದಲ ಪುಟದಿಂದ) ಲಿಂಗರಾಜು, ಹಾಗೂ ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕ್ರಿಸ್ತರಾಜ್, ರೈತರ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ತಿತಿಮತಿಯ ಮುಖ್ಯರಸ್ತೆಯಲ್ಲಿ ನೂರಾರು ರೈತರು ಮೆರವಣಿಗೆಯ ಮೂಲಕ ಸಾಗಿ ತಿತಿಮತಿಯ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಜಮಾವಣೆಗೊಂಡರು. ನಂತರ ಮರದ ಕೆಳಗೆ ರೈತರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಆಸೀನರಾಗಿ ಅಧಿಕಾರಿಗಳಿಂದ ರೈತರ ಅಹವಾಲುಗಳನ್ನು ಸ್ವೀಕರಿಸಲಾಯಿತು. ಸಭೆಯ ಆರಂಭದಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕರಾದ ಚಿಮ್ಮಂಗಡ ಗಣೇಶ್, ಪ್ರಸ್ತಾಪಿಸಿ ಕಾಡು ಪ್ರಾಣಿಗಳಿಂದ ನಷ್ಟ ಸಂಭವಿಸಿದಾಗ ಇಲಾಖೆಯು ನೀಡುವ ಪರಿಹಾರ ಏನೇನು ಸಾಲದು ಹೆಚ್ಚಿನ ಪರಿಹಾರ ನೀಡುವ ಬಗ್ಗೆ ಇಲಾಖೆ ಕೈಗೊಂಡಿರುವ ಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಬಯಸಿದರು. ಈ ಸಂದರ್ಭ ಕಾಡಾನೆ, ಹುಲಿ ಹಾವಳಿಯಿಂದ ತೊಂದರೆ ಗೀಡಾಗಿರುವ ರೈತರ ಸಂಕಷ್ಟಗಳನ್ನು ಆಲಿಸಿ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿರುವದಾಗಿ ಸಭೆಗೆ ಮುಖ್ಯ ಅರಣ್ಯ ಸಂರಕ್ಷಣಾದಿ üಕಾರಿ ಲಿಂಗರಾಜು ಮಾಹಿತಿ ನೀಡಿದರು. ಸ್ವಂತ ಉಪಯೋಗಕ್ಕೆ ಮರಗಳನ್ನು ಬಳಸಿಕೊಳ್ಳಲು ನಿಗದಿತ ದಾಖಲಾತಿಗಳೊಂದಿಗೆ ಇಲಾಖೆಗೆ ಅರ್ಜಿ ಸಲ್ಲಿಸಬೇಕು. 30 ದಿನದ ಒಳಗೆ ಅರ್ಜಿಗೆ ಉತ್ತರ ಲಭ್ಯವಾಗದಿದ್ದಲ್ಲಿ ರೈತರು ತಮ್ಮ ಭೂಮಿಯಲ್ಲಿ ತಾವೇ ಬೆಳೆದಿರುವ ಮರಗಳನ್ನು ಸ್ವಂತ ಉಪಯೋಗಕ್ಕೆ ಬಳಸಿ ಕೊಳ್ಳಬಹು ದೆಂದು ಸಿಸಿಎಫ್ ಲಿಂಗರಾಜು ಮಾಹಿತಿ ನೀಡಿದರು.
ಆದಿವಾಸಿಗಳು ಸ್ವಾತಂತ್ರ್ಯ ಪೂರ್ವದಿಂದಲೂ ಬೆಳೆಗಾರ ರೊಂದಿಗೆ ಉತ್ತಮ ಬಾಂಧವ್ಯ ಇಟ್ಟು ಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರನ್ನು ಆಗಿಂದಾಗ್ಗೆ ತೆರವು ಗೊಳಿಸುವ ಪ್ರಯತ್ನ ಸಲ್ಲದು ಆದಿವಾಸಿ ಬುಡಕಟ್ಟು ಜನಾಂಗವು ಅರಣ್ಯವನ್ನು ಉಳಿಸಲು ಕಾರಣಕರ್ತ ರಾಗಿದ್ದಾರೆ. ಇವರಿಗೆ ತೊಂದರೆ
ಹುಲಿ ಹಾವಳಿಯಿಂದ ತೊಂದರೆ ಗೀಡಾಗಿರುವ ರೈತರ ಸಂಕಷ್ಟಗಳನ್ನು ಆಲಿಸಿ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿರುವದಾಗಿ ಸಭೆಗೆ ಮುಖ್ಯ ಅರಣ್ಯ ಸಂರಕ್ಷಣಾದಿ üಕಾರಿ ಲಿಂಗರಾಜು ಮಾಹಿತಿ ನೀಡಿದರು. ಸ್ವಂತ ಉಪಯೋಗಕ್ಕೆ ಮರಗಳನ್ನು ಬಳಸಿಕೊಳ್ಳಲು ನಿಗದಿತ ದಾಖಲಾತಿಗಳೊಂದಿಗೆ ಇಲಾಖೆಗೆ ಅರ್ಜಿ ಸಲ್ಲಿಸಬೇಕು. 30 ದಿನದ ಒಳಗೆ ಅರ್ಜಿಗೆ ಉತ್ತರ ಲಭ್ಯವಾಗದಿದ್ದಲ್ಲಿ ರೈತರು ತಮ್ಮ ಭೂಮಿಯಲ್ಲಿ ತಾವೇ ಬೆಳೆದಿರುವ ಮರಗಳನ್ನು ಸ್ವಂತ ಉಪಯೋಗಕ್ಕೆ ಬಳಸಿ ಕೊಳ್ಳಬಹು ದೆಂದು ಸಿಸಿಎಫ್ ಲಿಂಗರಾಜು ಮಾಹಿತಿ ನೀಡಿದರು.
ಆದಿವಾಸಿಗಳು ಸ್ವಾತಂತ್ರ್ಯ ಪೂರ್ವದಿಂದಲೂ ಬೆಳೆಗಾರ ರೊಂದಿಗೆ ಉತ್ತಮ ಬಾಂಧವ್ಯ ಇಟ್ಟು ಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರನ್ನು ಆಗಿಂದಾಗ್ಗೆ ತೆರವು ಗೊಳಿಸುವ ಪ್ರಯತ್ನ ಸಲ್ಲದು ಆದಿವಾಸಿ ಬುಡಕಟ್ಟು ಜನಾಂಗವು ಅರಣ್ಯವನ್ನು ಉಳಿಸಲು ಕಾರಣಕರ್ತ ರಾಗಿದ್ದಾರೆ. ಇವರಿಗೆ ತೊಂದರೆ ಪರಿಶೀಲನೆ ನಡೆಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುವದಾಗಿ ಸಿಸಿಎಫ್ ಭರವಸೆ ನೀಡಿದರು. ತಿತಿಮತಿಯ ಸೌದೆ ಡಿಪೋದ ಬಳಿ ಕಾಡಾನೆಗಳು ನಿರಂತರ ಅಲೆದಾಡು ತ್ತಿರುವದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ರೈಲ್ವೇ ಬ್ಯಾರಿಕೇಡ್‍ನ ಗೇಟ್ ನಿರ್ಮಾಣ ಮಾಡುವಂತೆ ತಿತಿಮತಿ ರೈತ ಮುಖಂಡ ಚೆಪ್ಪುಡೀರ ಕಾರ್ಯಪ್ಪ ಗಮನ ಸೆಳೆದರು. ಈ ಸಂದರ್ಭ ಡಿಎಫ್‍ಓ ಮರಿಯಾ ಕ್ರಿಸ್ತರಾಜ್ ಈ ಭಾಗದಲ್ಲಿ ಗೇಟ್ ನಿರ್ಮಾಣ, ರಸ್ತೆ ಬದಿ ಬೆಳೆದು ನಿಂತಿರುವ ಕಾಡು ಕಡಿಸುವ ಕೆಲಸವನ್ನು ತುರ್ತಾಗಿ ಮಾಡಲಾಗುವದು ಎಂದರು.
ಆರ್‍ಟಿಎಫ್ ತಂಡ ದಿನದ 24 ಗಂಟೆಯು ಕೆಲಸ ನಿರ್ವಹಿಸಬೇಕು. ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಮತ್ತೊಂದು ತೋಟಕ್ಕೆ ಓಡಿಸಬಾರದು ಎಂದು ರೈತ ಸಂಘದ ಮುಖಂಡರಾದ ಪುಚ್ಚಿಮಾಡ ಸುಭಾಶ್ ಅಧಿಕಾರಿಗಳ ಗಮನ ಸೆಳೆದರು ಈ ಸಂದರ್ಭ ಉತ್ತರಿಸಿದ ಅರಣ್ಯಾಧಿಕಾರಿಗಳು ರೈತರೊಂದಿಗೆ ಉತ್ತಮ ಬಾಂಧವ್ಯ ರೂಪಿಸಿಕೊಳ್ಳಲು ರೈತರ ಸಂಕಷ್ಟಕ್ಕೆ ಭಾಗಿಯಾಗಲು ಆರ್‍ಟಿಎಫ್ ತಂಡ ರಚಿಸಲಾಗಿದೆ. ಇನ್ನು ಮುಂದೆ ರಾತ್ರಿ ವೇಳೆಯಲ್ಲಿ ಕಾಡಾನೆಯನ್ನು ಓಡಿಸುವ ಪ್ರಯತ್ನ ನಿಲ್ಲಿಸಲಾಗುವದು. ಸಿಬ್ಬಂದಿಗಳನ್ನು ಎರಡು ಹಂತಗಳಲ್ಲಿ ನಿಯೋಗಿಸಿ ಕೆಲಸ ನಿರ್ವಹಿಸಲಾಗುವದು ಎಂದರು. ಕಾರ್ಯಕ್ರಮದಲ್ಲಿ ರೈತ ಮುಖಂಡರುಗಳಾದ ಚಕ್ಕೇರ ಮಧುಕುಶಾಲಪ್ಪ, ಮೇಚಂಡ ಕಿಶಾ, ಲಕ್ಷ್ಮಿಕಾಂತ್, ಪುಚ್ಚಿಮಾಡ ಕಿಶೋರ್, ಬೋಪಯ್ಯ, ಪ್ರದೀಪ್ ಪೂವಯ್ಯ, ಅಜ್ಜಿಕುಟ್ಟಿರ ಸುರೇಶ್, ಮೀದೇರಿರ ಪ್ರವೀಣ್, ಕಳ್ಳಿಚಂಡ ಕುಶಾಲಪ್ಪ, ಸೋಮವಾರಪೇಟೆಯ ಶಂಕರಪ್ಪ, ಉಮೇಶ್, ಮಹೇಶ್, ತಮ್ಮಯ್ಯ, ರಂಜಿ, ಬೋಪಣ್ಣ, ಭೀಮಯ್ಯ, ಹರೀಶ್, ಮದನ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಣ್ಣ, ಮಾಯಮುಡಿಯ ಎಸ್.ಎಸ್. ಸುರೇಶ್, ಮರಿಸ್ವಾಮಿ, ಕಿರಣ್, ಅಣ್ಣಯ್ಯ, ಸೇರಿದಂತೆ ರೈತ ಸಂಘದ ಪದಾಧಿಕಾರಿಗಳಾದ ಅಜ್ಜಮಾಡ ಚಂಗಪ್ಪ, ತೀತರಮಾಡ ಸುನೀಲ್, ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಅರಣ್ಯ ಅಧಿಕಾರಿ ಗಳಾದ ಮಡಿಕೇರಿಯ ಡಿಎಫ್‍ಓ ಮಂಜುನಾಥ್, ವನ್ಯಜೀವಿ ಡಿಎಫ್‍ಓ ಎಂ.ಎಂ. ಜಯ, ಹುಣಸೂರು ವನ್ಯಜೀವಿ ವಿಭಾಗದ ಎಸಿಎಫ್ ಪ್ರಸನ್ನ ಕುಮಾರ್, ಆರ್‍ಎಫ್‍ಓ ಗೋಪಾಲ್, ಗಂಗಾಧರ್, ಅಶೋಕ್, ಅರುಣ್, ಪೌಲ್, ಸಿಬ್ಬಂದಿಗಳು ಸೇರಿದಂತೆ ಪೊನ್ನಂಪೇಟೆ ಠಾಣಾಧಿಕಾರಿ ಮಹೇಶ್, ಹಾಗೂ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. -ಹೆಚ್.ಕೆ.ಜಗದೀಶ್