ಮಡಿಕೇರಿ, ಡಿ. 18: ಪಾಲಿಬೆಟ್ಟ ನೆಲ್ಲಿಕಾಡು ಮಾಲೀಕ ಹಾಗೂ ಹಿರಿಯ ರಾಜಕಾರಣಿ ಅಜ್ಜಿಕುಟ್ಟೀರ ಶಾಂತೂ ಅಪ್ಪಯ್ಯ (72) ಅವರು ಇಂದು ಮೈಸೂರಿನಲ್ಲಿ ನಿಧನರಾದರು.ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ, ರಾಜ್ಯ ಜೆಡಿಎಸ್‍ನ ಉಪಾಧ್ಯಕ್ಷರಾಗಿ, ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, ಮಡಿಕೇರಿಯ ಕೋದಂಡರಾಮ ದೇವಾಲಯದ ಟ್ರಸ್ಟಿಯಾಗಿ, ಹಲವು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ಶ್ರೀಯುತರು ಪತ್ನಿ, ಓರ್ವ ಪುತ್ರಿ, ಈರ್ವರು ಪುತ್ರರನ್ನು ಅಗಲಿದ್ದಾರೆ.ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘದ ಸ್ಥಾಪಕಾಧ್ಯಕ್ಷ ಎ.ಎನ್. ಸೋಮಯ್ಯ ಅವರ ಪುತ್ರರಾದ ಶಾಂತೂ ಅಪ್ಪಯ್ಯ ಅವರ ಸಹೋದರ ಪಸ್ತುತ ಗೌಹಾಟಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.(ಮೊದಲ ಪುಟದಿಂದ) ಮೃತರ ಅಂತ್ಯಕ್ರಿಯೆ ತಾ. 19 ರಂದು (ಇಂದು) ಪಾಲಿಬೆಟ್ಟದಲ್ಲಿ ನಡೆಯಲಿದೆ.
ಶಾಂತೂ ಅಪ್ಪಯ್ಯ ಅವರ ನಿಧನಕ್ಕೆ ಮಾಜಿ ಸಚಿವ ಯಂ.ಸಿ. ನಾಣಯ್ಯ, ಮಾಜಿ ಪುರಸಭಾಧ್ಯಕ್ಷ ಎಂ.ಪಿ. ಮುತ್ತಪ್ಪ, ಮಾಜಿ ಮೂಡಾ ಅಧ್ಯಕ್ಷ ಎಸ್.ಐ. ಮುನೀರ್ ಅಹಮದ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಾತಂಡ ರಮೇಶ್, ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸಣ್ಣುವಂಡ ಚಂಗಪ್ಪ ಇವರುಗಳು ಸಂತಾಪ ಸೂಚಿಸಿದ್ದಾರೆ.