ನಾಪೋಕ್ಲು, ಡಿ. 18: ಪೋಷಕರು ತಮ್ಮ ಮಕ್ಕಳನ್ನು ಕಷ್ಟಪಟ್ಟು ಓದುವಂತೆ ಮಾಡದೆ ಅವರು ಇಷ್ಟಪಟ್ಟು ಓದುವಂತೆ ಮಾರ್ಗದರ್ಶಕರಾಗಬೇಕೇ ಹೊರತು ತಮ್ಮ ಆಸೆ ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೇರುವಂತಾಗಬಾರದು ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಚೆಪ್ಪುಡಿರ ಜಿ. ಕುಶಾಲಪ್ಪ ಹೇಳಿದರು.
ಸ್ಥಳೀಯ ಶ್ರೀ ರಾಮಟ್ರಸ್ಟ್ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಕೊಡಗಿನಲ್ಲಿ ಸ್ವಯಂ ಉದ್ಯೋಗಕ್ಕೆ ಬೇಕಾದಷ್ಟು ಅವಕಾಶಗಳಿದ್ದು ಪೇಟೆ ಜೀವನಕ್ಕೆ ಮಾರುಹೋಗದಿರಿ ಎಂದು ತಿಳಿಹೇಳಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಬೊಪ್ಪಂಡ ಜಾಲಿ ಬೋಪಯ್ಯ ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಹ್ಯಾರಿ ಮಂದಣ್ಣ, ಕಾರ್ಯದರ್ಶಿ ಬಿದ್ದಾಟಂಡ ಪಾಪ ಮುದ್ದಯ್ಯ, ಟ್ರಸ್ಟಿಗಳಾದ ಅಪ್ಪಾರಂಡ ಅಪ್ಪಯ್ಯ, ಕಂಗಾಂಡ ಕಾಳಯ್ಯ, ಅರೆಯಡ ಸೋಮಪ್ಪ, ನಿವೃತ್ತ ಪ್ರಾಂಶುಪಾಲ ಪ್ರೊ. ಕಲ್ಯಾಟಂಡ ಪೂಣಚ್ಚ, ಎಂ.ಎಸ್. ಸುಬ್ರಮಣ್ಯ, ನಿವೃತ್ತ ಡಿವೈಎಸ್ಪಿ ಬಿದ್ದಾಟಂಡ ಮುತ್ತಣ್ಣ, ಮಂದನೆರವಂಡ ಸುನಿಲ್‍ದೇವಯ್ಯ, ನಾಯಕಂಡ ದೀಪುಚೆಂಗಪ್ಪ, ಪ್ರಾಂಶುಪಾಲೆ ಬಿ.ಎಂ. ಶಾರದ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿ ಶುಭ ಹಾರೈಸಿದರು.
ಪ್ರಾಂಶುಪಾಲೆ ಬಿ.ಎಂ. ಶಾರದ ಸ್ವಾಗತಿಸಿ, ಶಾಲಾ ನಾಯಕಿ ತಶಿಕಾ ತಂಗಮ್ಮ ವರದಿ ವಾಚಿಸಿದರು, ಕೆ.ಡಿ. ಶೋಭಿತಾ ಶಾಲಾ ವರದಿ ವಾಚಿಸಿದರು. ಶಿಕ್ಷಕಿ ಚಂದ್ರಕಲಾ ಅತಿಥಿಗಳ ಪರಿಚಯ ಮಾಡಿದರು. ಮುಂಡಂಡ ಕವಿತ ಗಣ್ಯರ ಶುಭಾಶಯ ವಾಚಿಸಿ ಟ್ರಸ್ಟಿ ಸುನಿಲ್‍ದೇವಯ್ಯ ವಂದಿಸಿದರು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.