ಕೂಡಿಗೆ, ಡಿ.18: ಸಮೀಪದ ಶಿರಂಗಾಲದಲ್ಲಿ ಬಸ್ಸು ಹಾಗೂ ಬೈಕಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರನ ತಲೆಗೆ ತೀವ್ರ ಗಾಯವಾದ ಘಟನೆ ನಡೆದಿದೆ.

ಕುಶಾಲನಗರ ಶಿರಂಗಾಲ ರಾಜ್ಯ ಹೆದ್ದಾರಿಯ, ಶಿರಂಗಾಲ ಮಣಜೂರು ಗ್ರಾಮದ ಸಮೀಪದಲ್ಲಿ ಇಂದು ಬೆಳಗಿನ ಜಾವ ಚಿತ್ರದುರ್ಗ ಜಿಲ್ಲೆಯ ಚೆಳಕೆರೆಯಿಂದ ಶಾಲಾ ವಿದ್ಯಾರ್ಥಿಗಳನ್ನು ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಕರೆದುಕೊಂಡು ಬರುತ್ತಿದ್ದ ಬಸ್ಸು (ಕೆಎ16ಡಿಂ519) ಹಾಗೂ ಮಣಜೂರಿನಿಂದ ಶಿರಂಗಾಲದತ್ತ ತೆರಳುತ್ತಿದ್ದ ಶಿರಂಗಾಲ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಶಿವರಾಂ ಅವರ ಬೈಕ್ (ಕೆ.ಎ.12 ಆರ್. 1440) ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಶಿವರಾಂ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಂಚಾರಿ ಬಸ್ ಅನ್ನು ವಶಪಡಿಸಿಕೊಂಡಿದ್ದಾರೆ.