ದೌರ್ಜನ್ಯ: ಆರೋಪಿಗೆ ಸಜೆ ಶನಿವಾರಸಂತೆ, ಡಿ. 18: ಶನಿವಾರಸಂತೆ ಸಮೀಪದ ಹಿತ್ತಲಕೇರಿ ಗ್ರಾಮದ ಕಾಫಿ ತೋಟವೊಂದಕ್ಕೆ ಕೆಲಸ ಮಾಡಲು ಬಂದ ಅಪ್ರಾಪ್ತ ಬಾಲಕಿಯನ್ನು ವ್ಯಕ್ತಿಯೊಬ್ಬ ಅಪಹರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಪ್ರಕರಣ ಸಂಬಂಧ ಆರೋಪಿಗೆ ಮಡಿಕೇರಿಯ ನ್ಯಾಯಾಲಯ 10 ವರ್ಷ ಸಜೆ ಹಾಗೂ ರೂ. 55 ಸಾವಿರ ದಂಡ ವಿಧಿಸಿದೆ.ಹಿತ್ತಲಕೇರಿ ಗ್ರಾಮದ ವಸಂತಕುಮಾರ್ (ಮೊದಲ ಪುಟದಿಂದ) ಅವರ ತೋಟಕ್ಕೆ ತಾ. 14.2.2018 ರಂದು ಕೆಲಸಕ್ಕೆ ಬಂದ ಯುವತಿಯನ್ನು ರವಿ ಎಂಬಾತ ಅಪಹರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಹಾಗೂ ಸಿಬ್ಬಂದಿ ಆರೋಪಿಯನ್ನು ಕುಶಾಲನಗರದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು.
ವಿಚಾರಣೆ ನಡೆಸಿದ ಕೊಡಗು ಜಿಲ್ಲಾ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಪವನೇಶ್ ಅವರು ಆರೋಪಿಗೆ 10 ವರ್ಷಗಳ ಸಜೆ, ರೂ. 55 ಸಾವಿರ ದಂಡ ವಿಧಿಸಿದ್ದಾರೆ. ಸರಕಾರದ ಪರ ಸರಕಾರಿ ಅಭಿಯೋಜಕರಾದ ಕೃಷ್ಣವೇಣಿ ವಾದಿಸಿದರು.