ಗೋಣಿಕೊಪ್ಪ ವರದಿ, ಡಿ. 18: ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ ಮೂಲಕ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ರೂ. 11.60 ಲಕ್ಷ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಗ್ರಾಮಸ್ಥರೊಂದಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ. ಆರ್. ಪಂಕಜ, ಮಾಯಮುಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೌರಿ, ಸದಸ್ಯರುಗಳಾದ ಆಪಟೀರ ಪ್ರದೀಪ್, ಚಿಣ್ಣಪ್ಪ, ಆಪಟೀರ ವಿಠಲ ನಾಚಯ್ಯ, ಮಣಿಕುಂಞ, ಬಸ್ರಾ ಇವರುಗಳು ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಜಿ.ಪಂ. ಸದಸ್ಯೆ ಪಂಕಜ, ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ರುದ್ರಬೀಡು ಸಾರ್ವಜನಿಕ ರಸ್ತೆ ಅಭಿವೃದ್ಧಿಗೆ ರೂ. 2.30 ಲಕ್ಷ, ಬಾನಂಡ ಕುಟುಂಬಸ್ಥರ ಮನೆ ರಸ್ತೆ ಅಭಿವೃದ್ಧಿಗೆ ರೂ. 1 ಲಕ್ಷ, ಮಡಿಕೇಬೀಡು ಸಾರ್ವಜನಿಕ ರಸ್ತೆಗೆ ರೂ. 2 ಲಕ್ಷ, ಜಫದ್ಕಟ್ಟೆ ಮಠದ ಸಾರ್ವಜನಿಕ ರಸ್ತೆಗೆ ರೂ. 2.50 ಲಕ್ಷ, ಮಾಯಮುಡಿ ಸರಕಾರಿ ಪ್ರೌಢಶಾಲೆ ದುರಸ್ತಿಗೆ ರೂ. 1.50 ಲಕ್ಷ, ಕಾಳಪಂಡ ಕುಟುಂಬಸ್ಥರ ಸಾರ್ವಜನಿಕ ರಸ್ತೆ ಅಭಿವೃದ್ಧಿಗೆ ರೂ. 2 ಲಕ್ಷ, ಮಾಯಮುಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಡೆಸ್ಕ್ ಖರೀದಿಗೆ ರೂ. 80 ಸಾವಿರ ಅನುದಾನ ನೀಡಲಾಗಿದೆ. ಇದರಂತೆ ಅಭವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಈ ಸಂದರ್ಭ ಗ್ರಾಮದ ಪ್ರಮುಖರುಗಳಾದ ಕಾಳಪಂಡ ರಾಜಾ, ಎಸ್.ಪಿ. ಮೋಹನ್ಚಂದ್ರ, ಚೆಪ್ಪುಡೀರ ಅಚ್ಚಯ್ಯ, ರವಿ, ಸಿ.ಕೆ. ಪ್ರದೀಪ್, ಸುಂದರ್ ಇತರರು ಇದ್ದರು.