ಮಡಿಕೇರಿ, ಡಿ. 18: ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಬಡುವಂಡ ಬೋಪಯ್ಯ-ಕನ್ನು ದಂಪತಿ ಪುತ್ರ ತಿಮ್ಮಯ್ಯ ಆಸ್ಟ್ರೇಲಿಯಾದಲ್ಲಿ ಅತ್ಯುತ್ತಮ ಕೆಡೆಟ್ ಪದವಿ ಪಡೆದಿದ್ದಾರೆ.

12ನೇ ತರಗತಿಯಲ್ಲಿ ಓದುತ್ತಿರುವ 18 ವರ್ಷದ ತಿಮ್ಮಯ್ಯ, ಆಸ್ಟ್ರೇಲಿಯನ್ ಏರ್‍ಫೋರ್ಸ್ ಕೆಡೆಟ್ ಪ್ಲೈಯಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಈ ಗೌರವ ಪಡೆದಿದ್ದಾರೆ. ನ್ಯೂಸೌತ್ ವೇಲ್ಸ್ ರಾಜ್ಯದಿಂದ 4 ಮಂದಿಯ ತಂಡ ಭಾಗವಹಿಸಿದ್ದು, ಈ ವಿದ್ಯಾರ್ಥಿಗೆ ಪದವಿ ಲಭ್ಯವಾಗಿದ್ದು, ಇವರ ತಂಡ ಅತ್ಯುತ್ತಮ ತಂಡ ಎಂಬ ಪ್ರಶಂಸೆಗೂ ಪಾತ್ರವಾಯಿತು. ಪೋಷಕರು ಸಿಡ್ನಿಯ ಬಕ್ಲಮ್ ಹಿಲ್ಸ್‍ನ ನಿವಾಸಿಗಳಾಗಿದ್ದಾರೆ.