ಕೂಡಿಗೆ, ಡಿ. 18: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ 3-4 ವರ್ಷಗಳಿಂದ ಮನೆಗಳ ಕಂದಾಯ, ನೀರಿನ ಕಂದಾಯವನ್ನು ಸಂದಾಯ ಮಾಡದ 17 ಮಂದಿಯ ಮನೆಯ ಕುಡಿಯುವ ನೀರಿನ ಸಂರ್ಪಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲಾಗಿದೆ. ಕೂಡಿಗೆ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯ ತೀರ್ಮಾನದಂತೆ ಕೂಡಿಗೆ ಹಾಗೂ ಹೆಗ್ಗಡಹಳ್ಳಿಯ ಮನೆಗಳ ಸಂಪರ್ಕ ಕಡಿತಗೊಳಿಸಲಾಗಿದೆ. ಕಳೆದ 3-4 ವರ್ಷ ಮನೆ ಕಂದಾಯ, ನೀರು ಕಂದಾಯ ಪಾವತಿ ಮಾಡದವರಿಗೆ ಗ್ರಾಮ ಪಂಚಾಯತಿ ವತಿಯಿಂದ ನೋಟೀಸ್ ನೀಡಲಾಗಿತು. ನೋಟೀಸ್‍ನಲ್ಲಿ ಕಂದಾಯ ಬಾಕಿ ಇರುವವರು ಸ್ವಲ್ಪ ಮಟ್ಟಿಗೆ ಕಂದಾಯವನ್ನು ಕಟ್ಟುವಂತೆ ಮನವಿ ಮಾಡಲಾಗಿತ್ತು. ಈ ಮನವಿಗೆ ಸ್ಪಂದನೆ ಇಲ್ಲದ್ದರಿಂದ ತಾತ್ಕಾಲಿಕವಾಗಿ ಮನೆಯ ನೀರಿನ ಸಂರ್ಪಕವನ್ನು ಕಡಿತಗೊಳಿಸಲಾಗಿದೆ.

ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಮನೆ ಕಂದಾಯ, ನೀರಿನ ಕಂದಾಯ ವಸೂಲಾತಿ ಬಗ್ಗೆ ಚರ್ಚೆ ನಡೆಸಿ ಹೆಚ್ಚು ಬಾಕಿ ಇರುವವರಿಗೆ ನೋಟೀಸ್ ನೀಡಿ ನಂತರದ 7 ದಿನಗಳಲ್ಲಿ ತಾತ್ಕಾಲಿಕವಾಗಿ ನೀರು ನಿಲ್ಲಿಸಿರುತ್ತೇವೆ. ಗ್ರಾಮ ಪಂಚಾಯತಿಗೆ ರೂ. 16 ಸಾವಿರ ಹಣ ಸಂದಾಯವಾಗಿದೆ ಎಂದು ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕ ನೀರಿನ ಸಂರ್ಪಕದಿಂದ ನೀರಿನ ಸೌಲಭ್ಯವಾಗುತ್ತಿದೆ.