ನಾಪೆÇೀಕ್ಲು, ಡಿ. 18: ಕೊಡವರ ಸಂಸ್ಕøತಿ, ಪದ್ಧತಿ - ಪರಂಪರೆ ವಿಶಿಷ್ಟವಾದದ್ದು ಎಂದು ರಾಷ್ಟ್ರೀಯ ವಿರಾಟ್ ಹಿಂದೂ ಸಂಘಂನ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಹೇಳಿದರು.

ಸಮೀಪದ ಕೊಳಕೇರಿ ಗ್ರಾಮದ ಅಪ್ಪಚ್ಚಿರ ರೆಮ್ಮಿ ನಾಣಯ್ಯ ಅವರ ಕಾವೇರಿ ಎಸ್ಟೇಟ್‍ನಲ್ಲಿ 8 ನೇ ವರ್ಷದ ತೋಕ್ ನಮ್ಮೆ (ಕೋವಿ ಹಬ್ಬ)ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದಲ್ಲಿಯೇ ಕೊಡವರು ವಿಭಿನ್ನ ಸಂಸ್ಕøತಿಯೊಂದಿಗೆ ಹೆಸರುವಾಸಿಯಾಗಿ ದ್ದಾರೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ವಿಶ್ವಮಟ್ಟದಲ್ಲಿ ಕೊಡವರ ಕೀರ್ತಿಯನ್ನು ಬೆಳಗಿದ್ದಾರೆ. ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವರ ಕೋವಿ ಹಕ್ಕು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್‍ನ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಕ್ಷಾತ್ರ ಬುಡಕಟ್ಟು ಜನಾಂಗಕ್ಕೆ ಸೇರಿರುವ ಕೊಡವರಲ್ಲಿ ಕೋವಿ ಪವಿತ್ರ ಸ್ಥಾನ ಪಡೆದಿದೆ. ಇದು ಜನಪದೀಯ ಹಾಗೂ ಹೇಳಿದರು. ಕೋವಿ ಕೊಡವರ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದ ಅವರು ಇದಕ್ಕೆ ಇರುವ ಮಹತ್ವವನ್ನು ಪ್ರಚಾರಪಡಿಸುವ ಉದ್ದೇಶದಿಂದ ಪ್ರತೀ ವರ್ಷ ಈ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿರುವದಾಗಿ ಹೇಳಿದರು.

ಇಂಡಿಯನ್ ಆಮ್ರ್ಸ್ ಆಕ್ಟ್ ಪ್ರಕಾರ ಕೊಡವರ ಜನಪದೀಯ ಕಾಯ್ದೆಯ ಆಧಾರದಲ್ಲಿ ಕೊಡಮಾಡ ಲಾಗಿರುವ ಬಂದೂಕು ಹಕ್ಕನ್ನು ಸರ್ಕಾರ ದುರ್ಬಲಗೊಳಿಸುವ ದಾಗಲಿ-ಕಸಿದು ಕೊಳ್ಳುವದಾಗಲಿ ಮಾಡಕೂಡದು ಈ ವಿಶೇಷ ಹಕ್ಕು ಅಭಾದಿತವಾಗಿ ಮುಂದುವರಿ ಯಬೇಕು. ಕೊಡವ-ಕೊಡವತಿಯರು ಇಂಡಿಯನ್ ಆಮ್ರ್ಸ್ ಆಕ್ಟ್ ಪ್ರಕಾರ ಕೋವಿ ಹೊಂದಿ ಕೊಳ್ಳಲು ವಿನಾಯಿತಿ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಬಾಚಮಂಡ ಬೆಲ್ಲು ಪೂವಪ್ಪ, ರಾಜ ಪೂವಣ್ಣ, ಅಪ್ಪಚ್ಚಿರ ರೆಮ್ಮಿ ನಾಣಯ್ಯ, ರೀನಾ ನಾಣಯ್ಯ, ಸುರೇಶ್, ಶೋಭಾ ಸುರೇಶ್, ಅಪ್ಪಾರಂಡ ಪ್ರಸಾದ್, ಪ್ರಕಾಶ್, ಶ್ರೀನಿವಾಸ್, ಕಾಟುಮಣಿಯಂಡ ಉಮೇಶ್, ಮೊಣ್ಣಂಡ ಕಾರ್ಯಪ್ಪ, ಅರೆಯಡ ಗಿರೀಶ್, ಕಲಿಯಂಡ ಮೀನಾ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಬಾಚಮಂಡ ಕಸ್ತೂರಿ, ಬೊಳಿಯಾಡಿರ ಸಂತು ಸುಬ್ರಮಣಿ, ನಾಟೋಳಂಡ ದಿಲೀಪ್, ಕುಲ್ಲೇಟಿರ ಅರುಣ್ ಬೇಬ, ಮತ್ತಿತರರಿದ್ದರು.

ನಂದಿನೆರವಂಡ ನಿಶಾ ಪ್ರಾರ್ಥನೆ, ಕಲಿಯಂಡ ಪ್ರಕಾಶ್ ಸ್ವಾಗತ, ಬಾಚರಣಿಯಂಡ ಚಿಪ್ಪಣ್ಣ ನಿರೂಪಿಸಿ, ವಂದಿಸಿದರು.