ಕುಶಾಲನಗರ, ಡಿ. 18: ಒಕ್ಕಲಿಗರ ಯುವ ವೇದಿಕೆ ಆಶ್ರಯದಲ್ಲಿ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ತಾ. 25 ರಂದು ಕುಲಬಾಂಧವರಿಗೆ ಜಿಲ್ಲಾಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಒಕ್ಕಲಿಗ ಯುವ ವೇದಿಕೆ ಆಶ್ರಯದಲ್ಲಿ ಕಳೆದ 3 ವರ್ಷಗಳಿಂದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷ ಪ್ರಥಮ ಬಾರಿಗೆ ಸಮುದಾಯ ಬಾಂಧವರಿಗೆ ಕ್ರಿಕೆಟ್ ಪಂದ್ಯಾಟವನ್ನು ಸ್ಥಳೀಯ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಪ್ರಥಮ ಬಹುಮಾನವಾಗಿ ರೂ. 10 ಸಾವಿರ, ದ್ವಿತೀಯ ರೂ. 6 ಸಾವಿರ, ತೃತೀಯ ಮತ್ತು ಚತುರ್ಥ ಬಹುಮಾನವಾಗಿ 3 ಸಾವಿರ ರೂ.ಗಳ ನಗದು ನೀಡಲಾಗುವದು. ಇದರೊಂದಿಗೆ ವೈಯಕ್ತಿಕ ಬಹುಮಾನಗಳು ಕೂಡ ನೀಡಲಾಗುವದು ಎಂದು ಅವರು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ಜೈರಾಜ್-9980492009, ಕಿರಣ್-9738880607, ಚೇತನ್-9980025891 ಸಂಪರ್ಕಿಸಬಹುದೆಂದು ಅವರು ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಅನಿಲ್, ಉಮಾಶಂಕರ್ ಮತ್ತಿತರರು ಇದ್ದರು.