ಮಡಿಕೇರಿ, ಡಿ.18 : ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕಿನಲ್ಲಿ ಭೂ ಕಂದಾಯ ಕಾಯ್ದೆ 94(ಸಿ) 94(ಸಿಸಿ)ಯಲ್ಲಿ ಇದುವರೆಗೆ ಎಷ್ಟು ಅರ್ಜಿಗಳು ಸ್ವೀಕೃತವಾಗಿವೆ, ಎಷ್ಟು ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಇದರಲ್ಲಿ ಎಷ್ಟು ಅರ್ಜಿಗಳು ಇತ್ಯರ್ಥª Áಗಲು ಬಾಕಿ ಇವೆ. ಎಷ್ಟು ತಿರಸ್ಕøತವಾಗಿದೆ. ತಿರಸ್ಕøತ ವಾಗಲು ಕಾರಣವೇನು ಎಂದು ಕಂದಾಯ ಸಚಿವ ದೇಶಪಾಂಡೆ ಮಾಹಿತಿ ಪಡೆದಿದ್ದಾರೆ.ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕಿನಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 94ಸಿ ಅಡಿಯಲ್ಲಿ ಇದುವರೆಗೆ ಮಡಿಕೇರಿ 2431, ವೀರಾಜಪೇಟೆಯಲ್ಲಿ 4106, ಒಟ್ಟು 6,537 ಅರ್ಜಿಗಳು ಸ್ವೀಕೃತವಾಗಿವೆ. ಮಡಿಕೇರಿ 1658, ವೀರಾಜಪೇಟೆಯಲ್ಲಿ 1268 ಅರ್ಜಿಗಳು ಒಟ್ಟು 2,926 ಅರ್ಜಿಗಳು ತಿರಸ್ಕøತ ಗೊಂಡಿವೆ. ಮಡಿಕೇರಿಯಲ್ಲಿ 472, ವೀರಾಜಪೇಟೆಯಲ್ಲಿ 1641 ಒಟ್ಟು 2113 ಅರ್ಜಿಗಳು ಮಂಜೂರಾಗಿವೆ. ಮಡಿಕೇರಿಯಲ್ಲಿ 2,130, ವೀರಾಜಪೇಟೆ ಯಲ್ಲಿ 2909 ಅರ್ಜಿಗಳು ವಿಲೇವಾರಿಯಾಗಿವೆ. ಮಡಿಕೇರಿಯಲ್ಲಿ 472, ವೀರಾಜಪೇಟೆಯಲ್ಲಿ 1586 ಒಟ್ಟು 2058 ಮಂಜೂರಾದ ಅರ್ಜಿಗಳಿಗೆ ಹಕ್ಕು ಪತ್ರ ನೀಡಲಾಗಿದೆ. ಹಕ್ಕುಪತ್ರ ನೀಡಲು ಬಾಕಿ ಇರುವ ಅರ್ಜಿಗಳು 55. ವಿಲೇವಾರಿಯಾಗದೆ ಬಾಕಿ ಇರುವ ಅರ್ಜಿಗಳು ಒಟ್ಟು 1498 ಆಗಿದೆ.

94 ಸಿಸಿ ಅಡಿಯಲ್ಲಿ : ಮಡಿಕೇರಿ 475, ವೀರಾಜಪೇಟೆಯಲ್ಲಿ 29, ಒಟ್ಟು 504 ಅರ್ಜಿಗಳು ಸ್ವೀಕೃತವಾಗಿವೆ. ಮಡಿಕೇರಿ 281 ಅರ್ಜಿಗಳು ತಿರಸ್ಕøತಗೊಂಡಿವೆ. ಮಡಿಕೇರಿ ಯಲ್ಲಿ 115 ಅರ್ಜಿಗಳು ಮಂಜೂರಾಗಿವೆ. ಮಡಿಕೇರಿಯಲ್ಲಿ 396 ಅರ್ಜಿಗಳು ವಿಲೇವಾರಿಯಾಗಿವೆ. ಮಡಿಕೇರಿಯಲ್ಲಿ 37 ಮಂಜೂರಾದ ಅರ್ಜಿಗಳಿಗೆ ಹಕ್ಕು ಪತ್ರ ನೀಡಲಾಗಿದೆ.

(ಮೊದಲ ಪುಟದಿಂದ) ಹಕ್ಕು ಪತ್ರ ನೀಡಲು ಬಾಕಿ ಇರುವ ಅರ್ಜಿಗಳು 78. ವಿಲೇವಾರಿಯಾಗದೆ ಬಾಕಿ ಇರುವ ಅರ್ಜಿಗಳು ಒಟ್ಟು 108 ಆಗಿದೆ.

ಗೋಮಾಳ, ಕೆರೆ, ದೇವರ ಕಾಡು, ಖಾಸಗಿ ಜಮೀನು, ಅರಣ್ಯ ಪ್ರದೇಶ, ಅರಣ್ಯ ಪ್ರದೇಶದ ನಿಗದಿಪಡಿಸಿದ ಅರ್ಹತಾ ದಿನಾಂಕದ ನಂತರ ಮನೆ ನಿಮಾಣ ಮಾಡಿರುವದು ಈಗಾಗಲೇ ಈ ಹಿಂದೆ ಕೆಲವರಿಗೆ ಹಕ್ಕುಪತ್ರ ನೀಡಿರುವದರಿಂದ ಹಾಗೂ ಸೂಕ್ತವಾದ ದಾಖಲೆಗಳು ಇಲ್ಲದ ಕಾರಣ ತಿರಸ್ಕøತ ಮಾಡಲಾಗಿದೆ.

ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥ ಮಾಡಿ ಯಾವಾಗ ಹಕ್ಕುಪತ್ರ ನೀಡಲಾಗುವದು. 94 ಸಿ ಅಡಿಯಲ್ಲಿ 1498 ಅರ್ಜಿಗಳು ಮತ್ತು 94 ಸಿಸಿ ಅಡಿಯಲ್ಲಿ 108 ಅರ್ಜಿಗಳು ಪರಿಶೀಲನಾ ಹಂತದಲ್ಲಿದ್ದು, ಶೀಘ್ರವಾಗಿ ವಿಲೇವಾರಿ ಮಾಡಿ ಮಂಜೂರಾದ ಪ್ರಕರಣಗಳಿಗೆ ಹಕ್ಕು ಪತ್ರ ನೀಡಲು ಕ್ರಮವಹಿಸಲಾಗುವದು ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.