ಕುಶಾಲನಗರ, ಡಿ. 18: ಕುಶಾಲನಗರ ಗಣಪತಿ ದೇವಾಲಯಕ್ಕೆ ಸೇರಿದ ಅಂಗಡಿ ಮಳಿಗೆಗಳ ತೆರವುಗೊಳಿಸಲು ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿದೆ. ಅಂಗಡಿ ಮಳಿಗೆದಾರರು ಮತ್ತು ದೇವಾಲಯ ಸಮಿತಿ ನಡುವೆ ಕಳೆದ ಹಲವು ದಶಕಗಳಿಂದ ನಡೆಯುತ್ತಿದ್ದ ವ್ಯಾಜ್ಯದ ಹಿನ್ನೆಲೆ ಹೈಕೋರ್ಟ್ ದೇವಾಲಯ ಪರವಾಗಿ ತೀರ್ಪು ನೀಡಿದೆ ಎಂದು ಕುಶಾಲನಗರ ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ತಿಳಿಸಿದ್ದಾರೆ.