ಮಡಿಕೇರಿ, ಡಿ. 18: ಮೂರ್ನಾಡು ವಿದ್ಯಾಸಂಸ್ಥೆ ಮತ್ತು ಜಾನಪದ ಪರಿಷತ್ ಮೂರ್ನಾಡು ಹೋಬಳಿ ಘಟಕದ ಸಂಯುಕ್ತ ಆಶ್ರಯದಲ್ಲಿ ತಾ. 27 ರಂದು ಖ್ಯಾತ ವಾಗ್ಮಿ ಹಾಗೂ ಕನ್ನಡ ಪೂಜಾರಿ ಎಂದೇ ಜನಪ್ರಿಯರಾದ ಹಿರೇಮಗಳೂರು ಕಣ್ಣನ್ ಅವರಿಂದ ಮೂರ್ನಾಡು ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ‘ಶಿಕ್ಷಕರ ಸಶಕ್ರೀಕರಣ ಮತ್ತು ಜಾನಪದ ಸಂಸ್ಕøತಿ ಉಳಿಸುವಲ್ಲಿ ಶಿಕ್ಷಕ ಸಮುದಾಯದ ಪಾತ್ರ’ ಎಂಬ ವಿಷಯದ ಕುರಿತಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮೂರ್ನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಬಾಚೆಟ್ಟಿರ ಜಿ. ಮಾದಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಜಾನಪದ ಪರಿಷತ್ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷ ಪ್ರಶಾಂತ್ ತಿಳಿಸಿದ್ದಾರೆ.