ಸೋಮವಾರಪೇಟೆ, ಡಿ. 19: ಸರ್ವ ಶಿಕ್ಷಣ ಅಭಿಯಾನ ಮತ್ತು ಬಿಜಾಪುರದ ಅಗಸ್ತ್ಯ ಇಂಟರ್‍ನ್ಯಾಷನಲ್ ಫೌಂಡೇಷನ್ ವತಿ ಯಿಂದ ಬಿಜಾಪುರದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ರಾಜ್ಯಮಟ್ಟದ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಯಲ್ಲಿ ಇಲ್ಲಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಶಿಧರ್ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಿಜಾಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಅಗಸ್ತ್ಯ ಇಂಟರ್‍ನ್ಯಾಷನಲ್ ಫೌಂಡೇಷನ್‍ನ ಅಧ್ಯಕ್ಷ ಅವರುಗಳಿಂದ ಪ್ರಶಸ್ತಿ ಪತ್ರದೊಂದಿಗೆ ನಗದು ಬಹುಮಾನ ಸ್ವೀಕರಿಸಿದರು.