ಸುಂಟಿಕೊಪ್ಪ, ಡಿ. 19: ಸೋಮವಾರಪೇಟೆ ತಾಲೂಕು ಆರೋಗ್ಯಧಿಕಾರಿಗಳ ಕಚೇರಿ, ಕುಶಾಲನಗರ ಕೇಂದ್ರ ಸ್ಥಾನ, ಸೂರ್ಲಬ್ಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಐಇಸಿ, ಬಿಸಿಸಿ ಅಡಿಯಲ್ಲಿ ಸಮೀಪದ ಕಿರಗಂದೂರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಾಡಿಸಲಾಗಿತ್ತು.

ಎಂ.ವಿ. ಅಭಿಷೇಕ್ (ಪ್ರಥಮ), ಬಿ.ಎನ್. ಮದನ್ (ದ್ವಿತೀಯ), ಪಿ.ಎಸ್. ದೀಪಕ್ (ತೃತೀಯ) ಬಹುಮಾನ ಪಡೆದುಕೊಂಡರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ. ಶಾಂತಿ ಮತ್ತು ಡಾ.ರಾಜ್ ಕುಮಾರ್ ಬಹುಮಾನ ವಿತರಿಸಿದರು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಸುಶೀಲ, ಅಂಗನವಾಡಿ ಕಾರ್ಯಕರ್ತೆ ಚಂದ್ರಿಕಾ, ಶಿಕ್ಷಕರಾದ ಸುಲೇಮಾನ್, ಗಿರೀಶ್, ಆಶಾ ಕಾರ್ಯಕರ್ತೆ ಸೇರಿದಂತೆ ಇತರರು ಇದ್ದರು. ನಂತರ ವಿದ್ಯಾಸಾಗರ್ ಕಲಾ ವೇದಿಕೆಯ ತಂಡದವರು ಆರೋಗ್ಯದ ಬಗ್ಗೆ ಬೀದಿ ನಾಟಕ ಪ್ರದರ್ಶಿಸಿ ಗಮನ ಸೆಳೆದರು.