ಮಹೇಶ್ ನಾಚಯ್ಯ
ವೀರಾಜಪೇಟೆ, ಡಿ. 19: ಕ್ಷುಲ್ಲಕ ವಿಷಯಗಳನ್ನು ಬದಿಗೊತ್ತಿ ಎಲ್ಲಾರೊಳು ಬೆರೆತು ಬಾಳುವದರಿಂದ ಮಾತ್ರ ಒಂದು ಜನಾಂಗ ಹಾಗೂ ಸಮಾಜದಲ್ಲಿ ಒಗ್ಗಟ್ಟು ಕಾಣಲು ಸಾಧ್ಯ. ಇದೇ ಒಂದು ನಾಗರಿಕ ಸಮಾಜದ ಲಕ್ಷಣ ಎಂದು ಪೂಮಾಲೆ ವಾರಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ಪ್ರತಿಪಾದಿಸಿದರು.
ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆದ ‘ಪಂಜರಪೇಟೆ ಕೊಡವ ಕೇರಿ ಒತ್ತೊರ್ಮೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವದೇ ಜನಾಂಗವಾಗಿರಲಿ, ಸಮಾಜದಲ್ಲಿ ಭಾಂದವ್ಯದ ಬೆಸುಗೆಯನ್ನು ಕಾಣುವಂತಾಗಬೇಕು ಎಂದರು.
ಸಭಾ ಕಾರ್ಯಕ್ರಮದ ನಂತರ ಕಿರಿಯರು ಹಾಗೂ ಹಿರಿಯರಿಗಾಗಿ ಹಲವಾರು ಮನರಂಜನೀಯ ಸ್ಪರ್ಧೆ-ಪೈಪೋಟಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕೇರಿಯ ಕಾರ್ಯದರ್ಶಿ ಚೇಂದಂಡ ವಸಂತ್‍ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಯಾಡಿದರು. ಕಳ್ಳಿಚಂಡ ಡಿಂಪಲ್ ಪ್ರಾರ್ಥಿಸಿದರು. ಉಪಾಧ್ಯಕ್ಷ ಕೊಪ್ಪಿರ ಅಮಿತ್ ಸೋಮಯ್ಯ ವಂದಿಸಿದರು. ಬೊಳೆಯಾಡಿರ ಮನು ಮುತ್ತಪ್ಪ, ಕೋಟ್ರಮಾಡ ರಮೇಶ್, ಆಟ್ರಂಗಡ ನವೀನ್, ಕಾಳಚೆಟ್ಟಿರ ಜಯ, ಕೊಂಗಂಡ ಪ್ರತಿಕ, ಮುಕ್ಕಾಟಿರ ಸ್ವರ್ಣ, ಮೀದೇರಿರ ಸತೀಶ್ ವೇದಿಕೆಯಲ್ಲಿದ್ದರು.