ಮಡಿಕೇರಿ, ಡಿ. 19: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಸಂದರ್ಭ ಕಾಫಿ ಬೆಳೆ ನಾಶವಾಗಿದ್ದು, ಈ ಸಂಬಂಧ ಬೆಳೆಗಾರರಿಗೆ ಪರಿಹಾರವಾಗಿ
ಕೇಂದ್ರ ಸರಕಾರ ರೂ. 126.71 ಕೋಟಿ ಅನುದಾನ ಬಿಡುಗಡೆ ಮಾಡಿರುವ ದಾಗಿ ಕಂದಾಯ ಇಲಾಖಾ ಸಚಿವ ಆರ್.ವಿ. ದೇಶಪಾಂಡೆ ಮಾಹಿತಿ ನೀಡಿದ್ದಾರೆ.
ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು, ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿ ಹಾಗೂ ಭೂಕುಸಿತದಿಂದಾಗಿ ಕಾಫಿ ತೋಟಗಳು ಕೊಚ್ಚಿಹೋಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕಾಫಿ ತೋಟದ ಮಾಲೀಕರಿಗೆ ಪರಿಹಾರ ನೀಡಲಾಗಿದೆಯೇ? ಎಂದು ಚುಕ್ಕೆ ಗುರುತಿನ ಪ್ರಶ್ನೆಯಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಿರುವ ಕಂದಾಯ ಸಚಿವರು ಕೊಡಗು ಮತ್ತು ಇತರ ಜಿಲ್ಲೆಗಳ ಕಾಫಿ ಬೆಳೆಯುವ ಪ್ರದೇಶಗಳಿಗೆ ಸಂಬಂಧಿಸಿದಂತೆ ಕಾಫಿ ಬೆಳೆ ನಷ್ಟ ಪರಿಹಾರ ಕೋರಿ ಕೇಂದ್ರ ಸರಕಾರಕ್ಕೆ ಎನ್.ಡಿ. ಆರ್.ಎಫ್. ಅಡಿಯಲ್ಲಿ ರೂ.128 ಕೋಟಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪೈಕಿ ಕೇಂದ್ರ ಸರಕಾರವು ರೂ.126.71 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನವನ್ನು ಸಂತ್ರಸ್ತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲು ಪ್ರಕ್ರಿಯೆ ಪ್ರಾರಂಭ ಗೊಂಡಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳಿಸ ಲಾಗುವದೆಂದು ಮಾಹಿತಿ ನೀಡಿದ್ದಾರೆ.
ಭೂ ಕುಸಿತದಿಂದಾಗಿ ಹಾನಿಗೊಳಗಾದ ಪ್ರದೇಶವನ್ನು ಪುನರ್‍ಚೇತನಗೊಳಿಸಲು ಎನ್.ಡಿ.ಆರ್.ಎಫ್., ಎಸ್.ಡಿ. ಆರ್.ಎಫ್. ಮಾರ್ಗ ಸೂಚಿಯ ಪ್ರಕಾರ ಪ್ರತಿ ಹೆಕ್ಟೇರ್‍ಗೆ ರೂ. 37,500ರಂತೆ ಪರಿಹಾರವನ್ನು
ಪ್ರತಿ ರೈತರಿಗೆ ಗರಿಷ್ಠ 2
ಹೆಕ್ಟೇರ್‍ಗೆ ಸೀಮಿತಗೊಳಿಸಿ ಸಂತ್ರಸ್ತರಿಗೆ ನೀಡಲಾಗುವದೆಂದು ಉತ್ತರಿಸಿದ್ದಾರೆ.