ಶ್ರೀಮಂಗಲ, ಡಿ. 19: ಚದುರಂಗ ಆಟದಿಂದ ಮಕ್ಕಳ ಏಕಾಗ್ರತೆ, ಜ್ಞಾಪಕ ಶಕ್ತಿ ವೃದ್ದಿಸುತ್ತದೆ. ಆದ್ದರಿಂದ ಈ ಆಟವನ್ನು ಅಭ್ಯಾಸ ಮಾಡಿಕೊಳ್ಳುವದು ತುಂಬಾ ಒಳ್ಳೆಯದು ಎಂದು ಜಿ.ಪಂ. ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ ಅಭಿಪ್ರಾಯಪಟ್ಟರು.
ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಲಯದಲ್ಲಿ ಗೋಣಿಕೊಪ್ಪಲು ರೋಟರಿ ಸಂಸ್ಥೆ ಹಾಗೂ ಜೆ.ಸಿ. ಪೊನ್ನಂಪೇಟೆ ಗೋಲ್ಡನ್ ವತಿಯಿಂದ ನಡೆದ ಜಿಲ್ಲಾಮಟ್ಟದ ಚದುರಂಗ ಪಂದ್ಯಾವಳಿಯಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತ ನಾಡಿದರು. ನಿವೃತ್ತ ಪ್ರಾಂಶುಪಾಲ ಬಾಚೀರ ಕಾಶಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಪಾರುವಂಗಡ ದಿಲನ್ ಚಂಗಪ್ಪ ವಹಿಸಿದ್ದರು. ವೇದಿಕೆಯಲ್ಲಿ ಅಪ್ಪಚ್ಚ ಕವಿ ವಿದ್ಯಾಲಯದ ಉಪಾಧ್ಯಕ್ಷ ದಿನೇಶ್ ಚಿಟ್ಟಯಪ್ಪ, ಪಂದ್ಯಾವಳಿಯ ತೀರ್ಪುಗಾರರಾದ ಪೊನ್ನಿಮಾಡ ಪ್ರದೀಪ್, ರೋಟರಿ ಆನ್ಸ್ ಅಧ್ಯಕ್ಷೆ ರಿಸ್ತಾ ಚಂಗಪ್ಪ, ಇಂಟರ್ಯಾಕ್ಟ್ ಅಧ್ಯಕ್ಷೆ ಧನ್ಯ, ಗೋಲ್ಡನ್ ಜೆ.ಸಿ. ಪದಾಧಿಕಾರಿಗಳಾದ ನಿರನ್, ಸತೀಶ್ ಉಪಸ್ಥಿತರಿದ್ದರು.
ಫಲಿತಾಂಶ: ಕಾಲೇಜು ವಿಭಾಗ- ರಜತ್ ಗುರುರಾಜ್ (ಪ್ರಥಮ), ಸರಾನಿಧಿ (ದ್ವಿತೀಯ), ಶಶಾಂಕ್ (ತೃತೀಯ), ಪ್ರೌಢಶಾಲಾ ವಿಭಾಗ ಬಾಲಕರು- ಅಯೂರ್ (ಪ್ರಥಮ), ಕರಣ್ ಸತೀಶ್(ದ್ವಿತೀಯ), ಜೀವನ್ (ತೃತೀಯ), ಬಾಲಕಿಯರ ವಿಭಾಗದಲ್ಲಿ- ಸ್ನೇಹಾಶ್ರೀ (ಪ್ರಥಮ), ನೀಲಮ್ಮ (ದ್ವಿತೀಯ), ಸದ್ವಿನಿ (ತೃತೀಯ). ಪ್ರಾಥಮಿಕ ಶಾಲಾ ವಿಭಾಗ ಬಾಲಕರು- ಹರಿಕೃಷ್ಣ (ಪ್ರಥಮ), ಲಿಜೋ ಜೇಮ್ಸ್ (ದ್ವಿತೀಯ), ತರುಣ್ ಮತ್ತು ಮೌರ್ಯ ಕೃಷ್ಣೇಗೌಡ (ತೃತೀಯ), ಬಾಲಕಿಯರ ವಿಭಾಗ- ಸಾನಿಧ್ಯ (ಪ್ರಥಮ), ತಂಗಮ್ಮ (ದ್ವಿತೀಯ) ಬೊಳ್ಳಮ್ಮ (ತೃತೀಯ) ಸ್ಥಾನ ಪಡೆದು ಪ್ರಶಸ್ತಿ ಪತ್ರ ಹಾಗೂ ಬಹುಮಾನ ಪಡೆದರು.