ಕುಶಾಲನಗರ, ಡಿ. 19: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ನಡೆಯಿತು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮ ವನ್ನು ಮುಖ್ಯ ಶಿಕ್ಷಕಿ ರಾಣಿ ಉದ್ಘಾಟಿಸಿದರು. ಶಾಲಾ ಮಕ್ಕಳಿಂದ ನಿರ್ಮಾಣಗೊಂಡ ಸಂತೆ ವಾತಾವರಣ ಪೋಷಕರು, ಶಿಕ್ಷಕರನ್ನು ಆಕರ್ಷಿಸಿತು. ಹಣ್ಣು, ತರಕಾರಿ, ಸಿಹಿ, ಖಾರದ ತಿಂಡಿಗಳ ಮಾರಾಟ, ಚುರುಮುರಿ ಸ್ಟಾಲ್, ದಿನಬಳಕೆ, ಅಲಂಕಾರಿಕೆ, ಸೌಂದರ್ಯವರ್ಧಕ ಸಾಮಗ್ರಿಗಳ ಮಾರಾಟದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡ ದೃಶ್ಯ ಗೋಚರಿಸಿತು. ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಟಿ. ಶ್ರೀನಿವಾಸ್, ಶಿಕ್ಷಕರಾದ ಕಮಲಾ, ಪಾರ್ವತಿ, ಭಾರತಿ, ಗಾಯತ್ರಿ, ಕುಸುಮ ಮತ್ತಿತರರು ಇದ್ದರು.