ಕುಶಾಲನಗರ, ಡಿ. 19: ಬೆಂಗಳೂರಿನ ಆರ್ಯವೈಶ್ಯ ಮಹಾಸಭಾದ ವತಿಯಿಂದ ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪ ಸಂತ್ರಸ್ತರೊಬ್ಬರಿಗೆ ರೂ. 1 ಲಕ್ಷ ಧನ ಸಹಾಯ ವಿತರಿಸಲಾಯಿತು. ಮಡಿಕೇರಿಯ ಅಬ್ಬಿಫಾಲ್ಸ್ ಬಳಿ ನೆಲೆಸಿದ್ದ ಸಂತ್ರಸ್ತರಾದ ಪ್ರಮೋದ್ ಅವರಿಗೆ ರೂ. 1 ಲಕ್ಷದ ಚೆಕ್ ಹಸ್ತಾಂತರಿಸಲಾಯಿತು.

ಈ ಸಂದರ್ಭ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಯುವ ಪರಿಷತ್ ಸಹ ಸಂಚಾಲಕ ವಿ.ಆರ್. ಮಂಜುನಾಥ್, ಆರ್ಯವೈಶ್ಯ ಮಹಾಸಭಾ ನಿರ್ದೇಶಕ ಎಸ್.ಎನ್. ನರಸಿಂಹಮೂರ್ತಿ, ಜಿಲ್ಲಾ ಘಟಕ ಅಧ್ಯಕ್ಷರಾದ ಬಿ.ಆರ್. ನಾಗೇಂದ್ರಪ್ರಸಾದ್, ವಾಸವಿ ಯುವಜನ ಸಂಘದ ಕಾರ್ಯದರ್ಶಿ ಅರ್ಜುನ್ ಎನ್. ಗುಪ್ತ ಮತ್ತಿತರರು ಇದ್ದರು.