ಸುಂಟಿಕೊಪ್ಪ, ಡಿ. 21: ಸೋಮವಾರಪೇಟೆ ಶಿಕ್ಷಣ ಇಲಾಖೆ ವತಿಯಿಂದ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಇತ್ತೀಚೆಗೆ ನಡೆದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅಂಗವಿಕಲರ ಏಳಿಗೆಗಾಗಿ ದುಡಿದ ಐವರು ಸಮಾಜ ಸೇವಕರನ್ನು ಸನ್ಮಾನಿಸಲಾಯಿತು.
ಸುಂಟಿಕೊಪ್ಪದ ಸ್ವಸ್ಥ ಶಾಲೆಯ ಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮದ ಸಂಯೋಜಕ ಎಸ್. ಮುರುಗೇಶ್, ವಿಶೇಷಚೇತನರ ಕಲ್ಯಾಣ ಇಲಾಖೆಯ ಹರೀಶ್, ಅಂಗವಿಕಲರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಂಗಮೇಶ್, ಡಯಟ್ನ ಶಾಂತಕುಮಾರ್ ಹಾಗೂ ಪೋಷಕರಾದ ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು.
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ತಂಗಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್. ಮಂಜುನಾಥ್, ಪ್ರಮುಖರಾದ ಟಿ.ಕೆ. ಬಸವರಾಜು, ಸಿ.ಕೆ. ಶಿವಕುಮಾರ್, ರತ್ನಮ್ಮ, ಹರೀಶ್, ಐಇಆರ್ಟಿ ವೆಂಕಟೇಶ್ ಇದ್ದರು.