ಮಡಿಕೇರಿ, ಡಿ. 21: ನಾಪೋಕ್ಲು ಸಮೀಪದ ಚೆರಿಯಪರಂಬುವಿನಲ್ಲಿ ಅಪ್ರಾಪ್ತೆ 16 ವರ್ಷದ ಬಾಲೆಯೊಬ್ಬಳ ಮೇಲೆ ಅತ್ಯಾಚಾರದೊಂದಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಮೇರೆಗೆ, ಹುಣಸೂರು ಸನಿಹದ ಬಿಳಿಕೆರೆ ಮೂಲದ ಗಾರೆ ಕೆಲಸ ಮಾಡುವ ಕಾರ್ಮಿಕ ದಿನೇಶ್ (19) ಎಂಬಾತನನ್ನು ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ವಿದ್ಯಾರ್ಥಿನಿ ಯಾಗಿರುವ ಬಾಲೆಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಮೇರೆಗೆ ಫೋಕ್ಸೋ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿರುವ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವದರೊಂದಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.